Log In
BREAKING NEWS >
ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಶಿರೂರು ಶ್ರೀನಾಮಪತ್ರ ಸಲ್ಲಿಕೆ.....ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಬೆಳಗಾವಿಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದು 7 ಬಾಂಗ್ಲಾದೇಶಿಯರ ಬಂಧನ

ಬೆಳಗಾವಿ: ಬೆಳಗಾವಿಯ ಹೃದಯ ಭಾಗವಾದ ಹೊಸ ಗಾಂಧಿನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶದ ಓರ್ವ ಮಹಿಳೆ ಸೇರಿದಂತೆ ಏಳು ಪ್ರಜೆಗಳನ್ನು ಮಾಳಮಾರುತಿ ಪೊಲೀಸ್ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತ ಅಕ್ರಮ ವಲಸಿಗ ಮಹಮ್ಮದ್ ಬೇಪಾರಿ ನೀಡಿದ ಮಾಹಿತಿ ಮೆರೆಗೆ ಇಂದು ದಾಳಿ ನಡೆಸಿದ ಪೊಲೀಸರು, ದೇಶದ ಗಡಿಯಲ್ಲಿ ಆಕ್ರಮವಾಗಿ ನುಸುಳಿ ಬಂದು ನಗರದಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ಏಳು ಪ್ರಜೆಗಳನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತರು ಅಂಜುಬೇಗ್, ಹಫಿಜುಲ್ಲಾ ಇಸ್ಲಾಂ, ಕಕೀಬ್, ಅಬ್ದುಲ್ ನಿಹಾರ್ ಅಲಿ ಗಾಜಿ, ಅನ್ವರ್ ಸದ್ದಾರ್, ರೋಹನ್, ಮಹಮ್ಮದ್ ಅಲ್ವಿನ್ ಶೌಫಿವುದ್ದೀನ್ ಬೇಪಾರಿ ಎಂದು ಗುರುತಿಸಲಾಗಿದೆ.

ನಕಲಿ ಪಾಸ್ ಪೋರ್ಟ್ ಬಳಿಸಿ ದುಬೈಗೆ ಪ್ರಯಾಣ ಬೆಳೆಸಲು ಯತ್ನಿಸುತ್ತಿದ್ದ ಮಹಮ್ಮದ್ ಬೇಪಾರಿಯನ್ನು ಇತ್ತೀಚಿಗೆ ಪುಣೆ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಬೇಪಾರಿ ಬಂಧನದ ಬಳಿಕ ಬೆಳಗಾವಿಯಲ್ಲೂ ಅಕ್ರಮ ವಲಸಿಗರ ಜಾಲ ಪತ್ತೆಯಾಗಿದೆ.

No Comments

Leave A Comment