Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಗುವಾಹತಿ ರೈಲ್ವೆ ಪೊಲೀಸರಿಂದ 6 ಕೋಟಿ ಮೌಲ್ಯದ ಚಿನ್ನ ಜಪ್ತಿ, ನಾಲ್ವರ ಬಂಧನ

ಗುವಾಹತಿ: ಗುವಾಹತಿಯಲ್ಲಿ ರೈಲ್ವೆ ಪೊಲೀಸರು ಶುಕ್ರವಾರ ಆರು ಕೋಟಿ ರುಪಾಯಿ ಮೌಲ್ಯದ 20ಕೆಜಿ ಚಿನ್ನದ ಬಿಸ್ಕಿಟ್ ಅನ್ನು ಜಪ್ತಿ ಮಾಡಿದ್ದು, ಎಕ್ಸ್ ಪ್ರೆಸ್ ರೈಲಿನ ಮೂಲಕ ದೆಹಲಿಗೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳು ಮಿಜೋರಾಂನ ಐಜವ್ಲ್ ನವರಾಗಿದ್ದು, ತ್ರಿಪುರ ಸುಂದರಿ ರೈಲಿನಲ್ಲಿ ತ್ರಿಪುರ ರಾಜಧಾನಿ ಅಗರತಾಲ್ ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರು.

ವಾಡಿಕೆಯಂತೆ ನಿತ್ಯ ರೈಲು ತಪಾಸಣೆ ನಡೆಸುತ್ತಿದ್ದ ವೇಳೆ, ಅಕ್ರಮವಾಗಿ ಸಾಗಿಸುತ್ತಿದ್ದ 20 ಕೆಜಿ ತೂಕದ 12 ಚಿನ್ನದ ಬಿಸ್ಕಿಟ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಗುವಾಹತಿ ರೈಲ್ವೆ ನಿಲ್ದಾಣದ ಮುಖ್ಯಸ್ಥ ಪಂಕಜ್ ಕಲಿತ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಇತ್ತೀಚಿಗೆ ಜಪ್ತಿ ಮಾಡಿದ ಅತಿ ದೊಡ್ಡ ಮೌಲ್ಯದ ಬಂಗಾರ ಇದಾಗಿದ್ದು, ಎರಡು ವರ್ಷಗಳ ಹಿಂದೆ ಗುವಾಹತಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 37 ಕೆಜಿ ಬಂಗಾರ ಜಪ್ತಿ ಮಾಡಲಾಗಿತ್ತು.

No Comments

Leave A Comment