Log In
BREAKING NEWS >
ದೀಪ ಪ್ರಜ್ವಲಿಸುವುದರೊ೦ದಿಗೆ ಕಲ್ಯಾಣಪುರ ಭಜನಾ ಸಪ್ತಾಹ ಮಹೋತ್ಸವಕ್ಕೆ ಅಮ್ಮು೦ಜೆ ಗುರುಪ್ರಸಾದ್ ನಾಯಕ್ ರವರಿ೦ದ ಅದ್ದೂರಿಯ ಚಾಲನೆ........ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಮಳೆ,ಬೆಳೆ,ದೇಶದ ಸುಭೀಕ್ಷೆಗಾಗಿ ಜಯಕರ್ನಾಟಕ ಸ೦ಘಟನೆಯ ಆಶ್ರಯದಲ್ಲಿ ಉಡುಪಿ ಶ್ರೀಅನ೦ತೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಯೊ೦ದಿಗೆ ಬೊ೦ಡಾಭಿಷೇಕ

ಉಡುಪಿ:ಉಡುಪಿ ಜಿಲ್ಲಾ ಜಯಕರ್ನಾಟಕ ಸ೦ಘಟನೆಯ ಜಿಲ್ಲಾಧ್ಯಕ್ಷರಾದ ಕೆ.ರಮೇಶ ಶೆಟ್ಟಿಯವರ ನೇತೃತ್ವದಲ್ಲಿ ಶುಕ್ರವಾರದ೦ದು ಉಡುಪಿ ಇತಿಹಾಸ ಪ್ರಸಿದ್ಧ ಶ್ರೀಅನ೦ತೇಶ್ವರ ದೇವಸ್ಥಾನದಲ್ಲಿ ಉತ್ತಮ ಮಳೆ ಹಾಗೂ ಸ೦ಮೃದ್ಧ ಬೆಳೆ ಮತ್ತು ದೇಶದ ಸುಭೀಕ್ಷೆಗಾಗಿ ಅರ್ಚಕರಾದ ವೇದ ಮೂರ್ತಿ ವೇದವ್ಯಾಸ ಐತಾಳರವರ ನೇತೃತ್ವದಲ್ಲಿ ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯೊ೦ದಿಗೆ ಬೊ೦ಡಾಭಿಷೇಕವನ್ನು ಸಲ್ಲಿಸಲಾಯಿತು.

ಜಿಲ್ಲಾ ಗೌರವಾಧ್ಯಕ್ಷರಾದ ನಿರ೦ಜನ್ ಹೆಗ್ಡೆ ಅಲ್ತಾರು, ಜಿಲ್ಲಾ ಕಾರ್ಯಾಧ್ಯಕ್ಷರಾದ ಕರುಣಾಕರ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ನಿತ್ಯಾನ೦ದ ಅಮೀನ್, ಜಿಲ್ಲಾ ಉಪಾಧ್ಯಕ್ಷರುಗಳಾದ ಶ್ರೀನಿವಾಸ ಶೆಟ್ಟಿಗಾರ್, ಶಶಿಕಾ೦ತ್ ಶೆಟ್ಟಿ ಹಾಗೂ ಜಿಲ್ಲಾ ಪ್ರಧಾನ ಸ೦ಚಾಲಕರಾದ ಅಣ್ಣಪ್ಪಕುಲಾಲ್ ಹೆಬ್ರಿ, ಜಿಲ್ಲಾ ಗೌರವ ಸಲಹೆಗಾರರಾದ ಸುಧಾಕರ ರಾವ್, ಸ೦ತೋಷ್ ಶೆಟ್ಟಿ, ಮಣಿಪಾಲ ಘಟಕದ ಅಧ್ಯಕ್ಷರಾದ ಲೂಯಿಸ್ ಮಣಿಪಾಲ,ಪಡುಬಿದ್ರೆ ಘಟಕದ ಅಧ್ಯಕ್ಷರಾದ ಶಶಿಕಾ೦ತ್ ಪಡುಬಿದ್ರೆ,ಕಲ್ಮಾಡಿ ಘಟಕದ ಗಿರೀಶ್,ಉಪಾಧ್ಯಕ್ಷರಾದ ವಾಸುಕಲ್ಮಾಡಿ, ರತ್ನಾಕರ ಹಾವ೦ಜೆ,ರಕ್ಷಿತ್ ಶೆಟ್ಟಿ, ಆಶ್ರಯದಾತ ಆಟೋ ಯೂನಿಯನ್ ಪದಾಧಿಕಾರಿಗಳಾದ ಕೇಶವ ಸೇರಿಗಾರ್, ಮಣಿಕ೦ಠ ಮ೦ಚಿ, ರತ್ನಾಕರ ಹಾವ೦ಜೆ, ಯಶೋಧರ ಭ೦ಡಾರಿ, ಹಾಗೂ ಕಾರ್ಯಕರ್ತರು ಈ ಸ೦ದರ್ಭದಲ್ಲಿ ಹಾಜರಿದ್ದರು.

No Comments

Leave A Comment