Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಇಟಾ: ಮದುವೆ ದಿಬ್ಬಣದ ಲಾರಿ ಕಾಲುವೆಗೆ ಉರುಳಿ 14 ಮಂದಿ ದಾರುಣ ಸಾವು

ಇಟಾ : ಮದುವೆಯ ದಿಬ್ಬಣ ಹೊತ್ತೂಯ್ಯುತ್ತಿದ್ದ ಲಾರಿಯೊಂದು ಕಾಲುವೆಗೆ ಉರುಳಿ 14 ಮಂದಿ ದಾರುಣವಾಗಿ ಸಾವನ್ನಪ್ಪಿ, 24 ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಅವಘಡ ಶುಕ್ರವಾರ ಬೆಳಗ್ಗೆ ಉತ್ತರಪ್ರದೇಶದ ಇಟಾದ ಸರೇನಿಮ್‌ ಎಂಬಲ್ಲಿ ನಡೆದಿದೆ.

ಮೃತರು ಶಂಶಾಬಾದ್‌ ಪ್ರದೇಶದವರಾಗಿದ್ದು, ಸಾಕ್ರುಲಿ ಎಂಬಲ್ಲಿ ವಿವಾಹ ಸಮಾರಂಭ ಮುಗಿಸಿ ದಿಬ್ಬಣಿಗರಾಗಿ ಬರುತ್ತಿದ್ದರು ಎಂದು ತಿಳಿದು ಬಂದಿದೆ.

ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಕೆಲವರನ್ನು ರಕ್ಷಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಬಗ್ಗೆ ತಿಳಿಸಿದ 2 ಗಂಟೆಗಳ ನಂತರ ಸ್ಥಳಕ್ಕಾಗಮಿಸಿದ ಜಲೇಸರ್‌ ಠಾಣೆಯ ಪೊಲೀಸರ ವಿರುದ್ಧ  ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಆಗಮಿಸುವಷ್ಟರಲ್ಲಿ ಸ್ಥಳೀಯರು ರಕ್ಷಣಾ ಕಾರ್ಯ ಮುಗಿಸಿದ್ದರು.

ಚಾಲಕ ನಿಯಂತ್ರಣಕಳೆದುಕೊಂಡು ಲಾರಿ ಚಲಾಯಿಸಿದ್ದೆ ದುರಂತಕ್ಕೆ ಕಾರಣ ಎಂದು ತಿಳಿದು ಬಂದಿದೆ.

No Comments

Leave A Comment