Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ಐಎಸ್ಐ ಏಜೆಂಟ್‌ಗೆ ಹಣಕಾಸು ನೆರವು: ಹವಾಲಾ ಹಣ ನಿರ್ವಾಹಕ ಬಂಧನ

ಮುಂಬೈ: ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐನ ಏಜೆಂಟ್ ಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಜಾವೆದ್ ನವೀವಾಲ ಎಂಬಾತನನ್ನು ಭಯೋತ್ಪದಾನೆ ನಿಗ್ರಹ ದಳ(ಎಟಿಎಸ್) ಅಧಿಕಾರಿಗಳು ಬಂಧಿಸಿದ್ದಾರೆ.

ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಎಟಿಎಸ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹವಾಲಾ ನಿರ್ವಾಹಕ ಜಾವೆದ್ ನವೀವಾಲ ಎಂಬಾತನನ್ನು ಬಂಧಿಸಲಾಗಿದೆ.

ಮಾಹಿತಿ ಪ್ರಕಾರ ನವೀವಾಲ ದಕ್ಷಿಣ ಮುಂಬೈಯಿಯ ಪ್ರತಿಷ್ಠಿತ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿದ್ಯಾರ್ಥಿಯಾಗಿದ್ದು, ಅಫ್ತಾಬ್ ಅಲಿ ಸಂಬಂಧಿಯಾಗಿದ್ದಾನೆ. ಕೆಲವು ದಿನಗಳ ಹಿಂದೆ ನವೀವಾಲ 15 ಸಾವಿರ ಹಣವನ್ನು ಅಫ್ತಾರ್ ಖಾತೆಗೆ ಜಮಾ ಮಾಡಿದ್ದ ಎಂದು ಎಟಿಎಸ್ ಹೇಳಿದೆ.

ಐಎಸ್ಐ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ತಾಬ್ ಅಲಿಯನ್ನು ಎಟಿಎಸ್ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಶಂಕಿತ ಭಯೋತ್ಪಾದಕ ಹಲವು ಮಹತ್ವ ವಿಷಯಗಳನ್ನು ಬಹಿರಂಗಪಡಿಸಿದ್ದಾನೆ.

No Comments

Leave A Comment