Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಕ್ವಿಟೋವಾ 4 ತಿಂಗಳ ನಂತರ ಟೆನಿಸ್‌ಗೆ

ನವದೆಹಲಿ: ಮನೆಗೆ ನುಗ್ಗಿದ ಕಳ್ಳನನ್ನು ತಡೆಯಲು ಹೋಗಿ ಎಡಗೈಗೆ ಗಂಭೀರ ಗಾಯ ಮಾಡಿಕೊಂಡಿದ್ದ ಚೆಕ್‌ ಗಣರಾಜ್ಯದ ಖ್ಯಾತ ಟೆನಿಸ್‌ ಆಟಗಾರ್ತಿ ಪೆಟ್ರಾ ಕ್ವಿಟೋವಾ 4 ತಿಂಗಳ ಸುದೀರ್ಘ‌ ವಿಶ್ರಾಂತಿಯ ನಂತರ ಟೆನಿಸ್‌ ಅಂಕಣಕ್ಕೆ ಮರಳಿದ್ದಾರೆ. 2 ಬಾರಿಯ ವಿಂಬಲ್ಡನ್‌ ಸಿಂಗಲ್ಸ್‌ ಚಾಂಪಿಯನ್‌ ಕ್ವಿಟೋವಾ, ತಾವು ಅಭ್ಯಾಸ ಮಾಡುತ್ತಿರುವ ಚಿತ್ರವನ್ನು ಫೇಸ್‌ ಬುಕ್‌ನಲ್ಲಿ ಪ್ರಕಟಿಸಿದ್ದಾರೆ.ಕಳೆದ ಡಿಸೆಂಬರ್‌ನಲ್ಲಿ ಕ್ವಿಟೋವಾ ಮನೆಗೆ ಕಳ್ಳ ನುಗ್ಗಿದ್ದ. ಆತನನ್ನು ತಡೆಯಲು ಹೋದ ವೇಳೆ ಚಾಕುವಿನಿಂದ ಗಾಯಕ್ಕೊಳಗಾಗಿದ್ದಾರೆ.

ಅದೂ ತಾವು ಆಡುವ ಎಡಗೈ ಬೆರಳುಗಳಿಗೆ ಗಾಯ ಮಾಡಿಕೊಂಡಿದ್ದಾರೆ. ವೈದ್ಯರ ಪ್ರಕಾರ ಕ್ವಿಟೋವಾ ಮತ್ತೆ ಟೆನಿಸ್‌ಗೆ ಮರಳುವುದು ಕಷ್ಟ ಎನ್ನಲಾಗಿತ್ತು. ಆದರೆ ಸತತ ಚಿಕಿತ್ಸೆ, ವಿಶ್ರಾಂತಿ ಮತ್ತು ಹೋರಾಟಕಾರಿ ಮನೋಭಾವದಿಂದ ಕ್ವಿಟೋವಾಗೆ ಟೆನಿಸ್‌ಗೆ ಮರಳುವ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಕಳೆದವಾರ ಫ್ರೆಂಚ್‌ ಓಪನ್‌ ಪ್ರವೇಶ ಪಟ್ಟಿಗೆ ಕ್ವಿಟೋವಾ ಹೆಸರನ್ನು ಸೇರಿಸಲಾಗಿದೆ. ಆದರೆ ಫ್ರೆಂಚ್‌ ಓಪನ್‌ ಆಡುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಮೇ 28ರಿಂದ ಜೂನ್‌ 11ರ ಫ್ರೆಂಚ್‌ ಓಪನ್‌ ನಡೆಯಲಿದೆ.

No Comments

Leave A Comment