Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ನಟಿ, ಮಾಡೆಲ್ ರೇಖಾ ಸಿಂಧು ಸಾವು

ವೆಲ್ಲೂರು : ತಮಿಳು ನಾಡಿನ ವೆಲ್ಲೂರು ಬಳಿಯ ವೆಂಟ್ರಂಪಲ್ಲಿ ಯ ಹೆದ್ದಾರಿಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ಮಾಡೆಲ್‌, ಫ್ಯಾಶನ್‌ ಡಿಸೈನರ್‌ ಮತ್ತು ಕಿರುತೆರೆ ನಟಿ ರೇಖಾ ಸಿಂಧು ದಾರುಣವಾಗಿ ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಕಾರಿನಲ್ಲಿದ್ದ ಚಾಲಕ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತ ರೇಖಾ ಸಿಂಧು 21 ರ ಹರೆಯದವರಾಗಿದ್ದು, ಫ್ಯಾಶನ್‌ ಡಿಸೈನರ್‌ ಆಗಿ ಗುರುತಿಸಿಕೊಂಡಿದ್ದು, ಕೆಲ ಧಾರವಾಹಿಗಳಲ್ಲೂ  ನಟಿಸಿದ್ದರು. ಬೆಂಗಳೂರಿನ ಬಾಣಸವಾಡಿ ನಿವಾಸಿ ಎಂದು ತಿಳಿದು ಬಂದಿದೆ.

ಚೆನ್ನೈಗೆ ಡಿಸೈನಿಂಗ್‌ ಕಾರ್ಯಕ್ರಮಕ್ಕೆ ತೆರಳಿ ಬೆಂಗಳೂರಿಗೆ ವಾಪಾಸಾಗುವ ವೇಳೆ ರಸ್ತೆಯ ವಿಭಾಜಕಕ್ಕೆ ಢಿಕ್ಕಿಯಾಗಿ ಕಾರು ಪಲ್ಟಿಯಾಗಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ತಿರುಪತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಿಂಧು ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಾಯಾಳುಗಳು ಸಿಂಧು ಅವರ ಸಹಾಯಕರಾದ ಅಭಿಷೇಕ್‌ ಕುಮಾರನ್‌(22),ಜಯನ್‌ಕಂದ್ರನ್‌(23) ಮತ್ತು ಚೆನ್ನೈನ ರಕ್ಷಣ್‌(20) ಎಂದು ತಿಳಿದು ಬಂದಿದೆ.

ರೇಖಾ ಕೃಷ್ಣಪ್ಪ ಎಂದು ತಪ್ಪು ಕಲ್ಪನೆ


ಅಪಘಾತದಲ್ಲಿ  ಕನ್ನಡ ಮತ್ತು ತಮಿಳು ಧಾರಾವಾಹಿಗಳ ಜನಪ್ರಿಯ ನಟಿ ರೇಖಾ ಕೃಷ್ಣಪ್ಪ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ಮೊದಲು ಸುದ್ದಿಯಾಗಿತ್ತು. ಆ ಬಳಿಕ ಫೇಸ್‌ಬುಕ್‌ನಲ್ಲಿ  ನಾನು ಕ್ಷೇಮವಾಗಿದ್ದೇನೆ,ಕುಟುಂಬ ಸದಸ್ಯರೊಂದಿಗೆ ಶೃಂಗೇರಿಗೆ ಪ್ರಯಾಣಿಸುತ್ತಿದ್ದೇನೆ ಎಂದು ಬರೆದು ಗೊಂದಲಗಳಿಗೆ ಅಂತ್ಯ ಹಾಡಿದ್ದರು.

No Comments

Leave A Comment