Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉತ್ತರ ಪ್ರದೇಶದ ಫಜಾಬಾದ್ ನಲ್ಲಿ ಶಂಕಿತ ಐಎಸ್​ಐ ಏಜೆಂಟ್ ಬಂಧನ

ಲಖನೌ: ಉತ್ತರ ಪ್ರದೇಶ ಉಗ್ರ ನಿಗ್ರಹ ಪಡೆ(ಎಟಿಎಸ್) ಬುಧವಾರ ಫೈಜಾಬಾದ್​ನಲ್ಲಿ ಶಂಕಿತ ಐಎಸ್​ಐ ಏಜೆಂಟ್ ​ನನ್ನು ಬಂಧಿಸಿದೆ ಮತ್ತು ವಿಚಾರಣೆಗಾಗಿ ಮತ್ತೊಬ್ಬನನ್ನು ವಶಕ್ಕೆ ಪಡೆದಿದೆ.

ಗುಪ್ತಚರ ಮಾಹಿತಿ ಆಧರಿಸಿ ಇಂದು ಎಟಿಎಸ್ ಪೊಲೀಸರು ಹಾಗೂ ಸೇನಾ ಗುಪ್ತಚರ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಐಎಸ್​ಐ ಏಜೆಂಟ್​ನನ್ನು ಗಾಜಿಯಾಬಾದ್​ನಿಂದ ಸುಮಾರು 120 ಕಿ.ಮೀ. ದೂರವಿರುವ ಫೈಜಾಬಾದ್​ನಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿ ಅಫ್ತಾಬ್ ಅಲಿ ಎಂದು ಗುರುತಿಸಲಾಗಿದೆ.

ಪಾಕಿಸ್ತಾನದ ಐಎಸ್​ಐ ನಿಂದ ತರಬೇತಿ ಪಡೆದಿದ್ದ ಅಫ್ತಾಬ್ ಭಾರತದಲ್ಲಿ ನಿಯೋಜಿತನಾಗಿದ್ದ. ಈತ ಪಾಕಿಸ್ತಾನದ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಫ್ತಾಬ್ ವಿರುದ್ಧ ಸಾಕಷ್ಟು ಸಾಕ್ಷಾಧಾರಗಳನ್ನು ಕಲೆ ಹಾಕಲಾಗಿದ ಮತ್ತು ಈ ಸಂಬಂಧ ಓರ್ವನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಟಿಎಸ್​ನ ಐಜಿ ಅಸೀಮ್ ಅರುಣ್ ಅವರು ತಿಳಿಸಿದ್ದಾರೆ.

No Comments

Leave A Comment