Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಶಿವಮೊಗ್ಗ ಭೀಕರ ಅಪಘಾತಕ್ಕೆ 7 ಮಂದಿ ಯುವಕರು ಸ್ಥಳದಲ್ಲೇ ದಾರುಣ ಸಾವು

ಶಿವಮೊಗ್ಗ : ತಾಲೂಕಿನ ಸಿಂಹಧಾಮದ ಬಳಿಯಿರುವ ಮುದ್ದಿನಕೊಪ್ಪ ಬಳಿ ಬುಧವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು,7 ಮಂದಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಿಂದ ಸಾಗರಕ್ಕೆ ತೆರಳಿದ್ದ ಇನ್ನೋವಾ ಮರದ ದಿಮ್ಮಿಗಳನ್ನು ತುಂಬಿದ ಲಾರಿಗೆ ಹಿಂಬದಿಯಿಂದ ಢಿಕ್ಕಿಯಾಗಿದ್ದು,ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಹೋಗಿದೆ. ಕಾರಿನಲ್ಲಿದ್ದ ಚಾಲಕ ಸೇರಿದಂತೆ ಎಲ್ಲರೂ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮೃತರ ಗುರುತು ಪತ್ತೆಯಾಗಿದ್ದು ಮಾಗಡಿ ಮೂಲದ ಮಧು, ಪ್ರವೀಣ್‌ ಎಂಬ ಸಹೋದರರು, ಶಿಕಾರಿಪುರದ ರಾಘವೇಂದ್ರ,ಚೋರಡಿ ಮಂಜುನಾಥ್‌ ,‌ ಬೆಂಗಳೂರಿನ ಶ್ರೀಧರ್‌ ಮತ್ತು ಸೊರಬ ಮೂಲದ ರಾಜಶೇಖರ್‌ ಎಂದು ತಿಳಿದು ಬಂದಿದೆ.

ಮದುವೆಗೆ ತೆರಳಿದ್ದವರು ಮಸಣ ಸೇರಿದರು!

ಸಾಗರದಲ್ಲಿ ಸ್ನೇಹಿತನ ಮದುವೆಗೆ ಬೆಂಗಳೂರಿನಿಂದ ಮೃತ ದುರ್ದೈವಿಗಳು ತೆರಳಿದ್ದರು ಎಂದು ತಿಳಿದು ಬಂದಿದೆ. ಸ್ಥಳದಲ್ಲಿ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಹೊರಗೆಳೆದು ತೆಗೆಯಲಾಗಿದೆ. ರಕ್ತದ ಕೋಡಿ ಹರಿದು ಹೋಗಿದ್ದು ದೃಶ್ಯ ರಣ ಭೀಕರವಾಗಿತ್ತು.

ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment