Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಕಾಶ್ಮೀರ ಬ್ಯಾಂಕ್ ನಿಂದ 4.92ಲಕ್ಷ ಲೂಟಿ ಮಾಡಿದ ಉಗ್ರರು

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗ್ರಾಮೀಣ ಬ್ಯಾಂಕ್ ಘಟಕದಿಂದ ಉಗ್ರರು ಬುಧವಾರ ೪.೯೨ ಲಕ್ಷ ಲೂಟಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪುಲ್ವಾಮಾ ಜಿಲ್ಲೆಯ ವಹಿಬುಗ್ ಗ್ರಾಮದ ಎಲ್ಲಾಕೆವೈ ಡೆಹಾಟಿ ಬ್ಯಾಂಕ್ (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್)ಗೆ ನುಗ್ಗಿದ ಗುರುತು ಪತ್ತೆಹಚ್ಚದ ಬಂಧೂಕುಧಾರಿಗಳು ಬೆದರಿಕೆಯೊಡ್ಡಿ ಹಣ ದೋಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮಂಗಳವಾರ ಇದೆ ಬ್ಯಾಂಕಿನ ಕುಲ್ಗಾಮ್ ಜಿಲ್ಲೆಯ ಘಟಕದಿಂದ ಗುರುತು ಪತ್ತೆ ಹಚ್ಚದ ಉಗ್ರರು ೬೫,೦೦೦ ರೂ ದೋಚಿದ್ದರು.

ಸೋಮವಾರ ಕುಲ್ಗಾಮ್ ಜಿಲ್ಲೆಯಲ್ಲಿ ಹಣ ಕೊಂಡೊಯ್ಯುತ್ತಿದ್ದ ವಾಹನದ ಮೇಲೆ ದಾಳಿ ಮಾಡಿದ್ದ ಉಗ್ರರು ಇಬ್ಬರು ಬ್ಯಾಂಕ್ ಸುರಕ್ಷಾ ಸಿಬ್ಬಂದಿಗಳು ಮತ್ತು ಐವರು ಪೊಲೀಸರನ್ನು ಒಳಗೊಂಡಂತೆ ಏಳು ಜನರನ್ನು ಹತ್ಯೆಗೈದಿದ್ದರು.

No Comments

Leave A Comment