Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

20 ಸಾವಿರ ಅಕ್ರಮ ವಲಸಿಗ ಭಾರತೀಯರು ಸೌದಿಯಿಂದ ವಾಪಸ್

ರಿಯಾದ್: ಸೌದಿ ಅರೇಬಿಯಾಗೆ ಅಕ್ರಮವಾಗಿ ವಲಸೆ ಹೋಗಿದ್ದ ಸಾವಿರಾರು ಭಾರತೀಯರಿಗೆ ಅಲ್ಲಿನ ಸರ್ಕಾರ 90 ದಿನಗಳ ಕ್ಷಮಾದಾನ ಗಡುವು ನೀಡಿದ್ದು, 20,000 ಅಕ್ರಮ ವಲಸಿಗರು ಭಾರತಕ್ಕೆ ವಾಪಸ್ಸಾಗಲಿದ್ದಾರೆ.

ಈ ಬಗ್ಗೆ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ಅನಿಲ್ ನೌತಿಯಾಲ್ ಖಾಸಗಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದು, 20,321 ಭಾರತೀಯರು ದೇಶಕ್ಕೆ ವಾಪಾಸ್ಸಾಗಲು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಪೈಕಿ 1,500 ಬ್ಲೂ ಕಾಲರ್ ಕೆಲಸಗಾರರು ತಮಿಳುನಾಡಿನ ಮೂಲದವರಾಗಿದ್ದು, ಕ್ಷಮಾದಾನದ ಯೋಜನೆಯಡಿ ವಾಪಸ್ಸಾಗುತ್ತಿರುವವರ ಪೈಕಿ ಹೆಚ್ಚಿನವರು ಉತ್ತರ ಪ್ರದೇಶ ಹಾಗೂ ಬಿಹಾರ ಮೂಲದವರು ಎಂದು ಅನಿಲ್ ನೌತಿಯಾಲ್ ಹೇಳಿದ್ದಾರೆ.

ಸೌದಿಯನ್ನು ತೊರೆಯುತ್ತಿರುವ ಭಾರತೀಯ ನಾಗರಿಕರಿಗಾಗಿಯೇ ಅಲ್ಲಿನ ಸರ್ಕಾರ ಪ್ರತ್ಯೇಕ ಕೇಂದ್ರಗಳನ್ನು ತೆರೆದಿದ್ದು, ಅಕ್ರಮವಾಗಿ ವಾಸಿಸುತ್ತಿರುವವರಿಗೆ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿರುವುದಾಗಿ ಅನಿಲ್ ನೌತಿಯಾಲ್ ತಿಳಿಸಿದ್ದಾರೆ.

No Comments

Leave A Comment