Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ದೇಶದ ಮುಂದಿನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು?

ಮುಂಬರವ ಜುಲೈಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಅಧಿಕಾರಾವಧಿ ಮುಗಿಯಲಿದ್ದು, ಮುಂದಿನ ರಾಷ್ಟ್ರಪತಿ ಯಾರಾಗಬಹುದೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಆ ನಡುವೆ ಪ್ರಧಾನಿ ಮೋದಿ ಇಡೀ ದೇಶಕ್ಕೆ ‘ಸರ್ಪ್ರೈಸ್’ ನೀಡುವ ಯೊಚನೆಯಲ್ಲಿದ್ದಾರೆಂದು ಹೇಳಲಾಗಿದೆ. ಮುಂದಿನ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಅವರನ್ನುಕಣಕ್ಕಿಳಿಸಲು ಅವರು ಚಿಂತನೆ ನಡೆಸುತ್ತಿದ್ದಾರೆಂದು ಪೋಸ್ಟ್’ಕಾರ್ಡ್ ವರದಿ ಮಾಡಿದೆ. ಹಾಲಿ ಜಾರ್ಖಂಡ್’ನ ರಾಜ್ಯಪಾಲೆಯಾಗಿರುವ ದ್ರೌಪದಿ ಮುರ್ಮು  ಹಿಂದೆ ಒಡಿಶಾದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಯಾರಿದು ದ್ರೌಪದಿ ಮುರ್ಮು?

ಒಡಿಶಾದ ಮಯೂರ್’ಭಂಜ್  ಜಿಲ್ಲೆಯ ಆದಿವಾಸಿ ಕುಟುಂಬದಿಂದ ಬಂದ ದ್ರೌಪದಿ ಮುರ್ಮು ಕಳೆದ 20 ವರ್ಷಗಳಿಂದ ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದಾರೆ. ದ್ರೌಪದಿ ಮುರ್ಮು ಒಡಿಶಾದಿಂದ ರಾಜ್ಯಪಾಲೆಯಾಗಿ ನೇಮಕವಾದ ಪ್ರಪಥಮ ಮಹಿಳೆಯಾಗಿದ್ದಾರಲ್ಲದೇ , ಜಾರ್ಖಂಡ್ ರಾಜ್ಯದ ಪ್ರಪಥಮ ಮಹಿಳಾ ರಾಜ್ಯಪಾಲೆ ಕೂಡಾ ಆಗಿದ್ದಾರೆ.

ಒಡಿಶಾದಲ್ಲಿ ಬಿಜೆಪಿ-ಬಿಜೆಡಿ ಮೈತ್ರಿಕೂಟದ ಸರ್ಕಾರವಿದ್ದಾಗ ಮುರ್ಮು ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ವಾಣಿಜ್ಯ ಹಾಗೂ ಸಾರಿಗೆ  ಸಚಿವರಾಗಿ 6 ಮಾರ್ಚ್ 2000 ರಿಂದ 6 ಆಗಸ್ಟ್ 2002ರವರೆಗೆ, ಹಾಗೂ 6 ಆಗಸ್ಟ್ 2002ರಿಂದ 16 ಮೇ 2004ರವರೆಗೆ ಮೀನುಗಾರಿಕಾ ಮತ್ತು ಪಶು ಸಂಪನ್ಮೂಲ ಸಚಿವರಾಗಿ ದುಡಿದಿದ್ದಾರೆ.

No Comments

Leave A Comment