Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಕುಂದಾಪುರ ಅಂತರ ಧರ್ಮೀಯ ವಿವಾಹಕ್ಕೆ ‘ಸಾಂತ್ವನ’ ಸಾಕ್ಷಿ:

ಕುಂದಾಪುರ: ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ದಲಿತ ಯುವಕ ಹಾಗೂ ಮುಸ್ಲಿಂ ಯುವತಿಯ ಮದುವೆಗೆ ಇಲ್ಲಿನ ಮಹಿಳಾ ಸಾಂತ್ವನ ಕೇಂದ್ರವು ಪೌರೋಹಿತ್ಯ ವಹಿಸಿತು.ಕುಂಭಾಸಿ ವಿನಾಯಕ ನಗರದ ಬಾಬು– ಶಾರದಾ ದಂಪತಿ ಪುತ್ರ ವಿವೇಕ್ ಹಾಗೂ ಕುಂಭಾಸಿ ವಿನಾಯಕ ನಗರದ ಅಬ್ದುಲ್ ಖಲೀಲ್– ಝೈನಾಬಿ ದಂಪತಿ ಪುತ್ರಿ ಸಲ್ಮಾಂ ಮದುವೆಯಾದ ಪ್ರೇಮಿಗಳು. ವಿವೇಕ್‌ ಕುಂದಾಪುರ ಖಾಸಗಿ ಕಾರ್ಖಾನೆ ಉದ್ಯೋಗಿ. ಸಲ್ಮಾ ಕೋಟೇಶ್ವರದ ಖಾಸಗಿ ಶಾಲೆಯ ವಾಹನದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು.

ಇಬ್ಬರು ಬೇರೆ ಧರ್ಮದವರು ಎಂಬುದನ್ನು ಕೂಡಾ ಲೆಕ್ಕಿಸದೇ ಪ್ರೀತಿಸುತ್ತಿದ್ದರು. ವಿವೇಕ್‌ ಮನೆಯಲ್ಲಿ ಮದುವೆಗೆ ಒಪ್ಪಿಗೆ ದೊರಕಿತ್ತು. ಆದರೆ, ಸಲ್ಮಾಂ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಯುವಕ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕು ಎಂಬ ಷರತ್ತು ವಿಧಿಸಿದ್ದರು. ಬಳಿಕ, ಈ ಜೋಡಿ ಕುಂದಾಪುರದ ಮಹಿಳಾ ಸಾಂತ್ವನ ಕೇಂದ್ರವನ್ನು ಸಂಪರ್ಕಿಸಿತ್ತು. ಸಹಾಯದ ಮೌಖಿಕ ಭರವಸೆ ಸಿಕ್ಕ ನಂತರ ಮದುವೆ ಆಗಿದ್ದಾರೆ.

ಕುಂದಾಪುರ ಮೂಕಾಂಬಿಕಾ ಮಹಿಳಾ ಮಂಡಳಿ ಅಧ್ಯಕ್ಷೆ ರಾಧಾದಾಸ್ ಅವರ ಮಾರ್ಗದರ್ಶನದಲ್ಲಿ ಹಸೆಮಣೆಯೇರಿದ್ದಾರೆ. ವರನ ತಂದೆ–ತಾಯಿ, ಸಂಬಂಧಿಕರು ಹಾಗೂ ಸ್ನೇಹಿತರು ಮದುವೆಗೆ ಸಾಕ್ಷಿಯಾದರು.

ಹೆಸರು ಬದಲಾವಣೆ: ನಾನು ಮತ್ತು ವಿವೇಕ್ ಇಷ್ಟಪಟ್ಟಿದ್ದೆವು. ಮದುವೆಗೆ ಮನೆಯಲ್ಲಿ ವಿರೋಧವಿದ್ದ ಕಾರಣಕ್ಕೆ ರಾಧಾದಾಸ್ ಅವರನ್ನು ಭೇಟಿ ಮಾಡಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದೆವು. ನನಗೆ ಹೆಸರು ಬದಲಾಯಿಸಿಕೊಳ್ಳಬೇಕು ಎಂಬ ಆಸೆ ಇದೆ ಎಂದು ವಧು ಸಲ್ಮಾಂ ಹೇಳಿದರು.

No Comments

Leave A Comment