Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಕೇದಾರನಾಥನಿಗೆ ರುದ್ರಾಭಿಷೇಕ ,ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ಡೆಹರಾಡೂನ್‌: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೇವ ಭೂಮಿಯಲ್ಲಿರುವ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ರುದ್ರಾಭಿಷೇಕ ಸಹಿತ ವಿಶೇಷ ಪೂಜೆ ಸಲ್ಲಿಸಿದರು.

ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಲುವಾಗಿ ಉತ್ತರಾಖಂಡ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಡೆಹರಾಡೂನ್‌ನಿಂದ ಮಿಲಿಟರಿ ಕ್ಯಾಪ್ಟರ್‌ನಲ್ಲಿ ಕೆದಾರನಾಥ ದೇವಾಲಯಕ್ಕೆ ಬಂದಿಳಿದರು. ಈ ವೇಳೆ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿತ್ತು.

2013 ರಲ್ಲಿ  ಜಲಪ್ರಳಯದಿಂದ ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದ ಕೇದಾರನಾಥ ದೇವಾಲಯದಲ್ಲಿ  ನಡೆದ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದರು.

ಯಾತ್ರಾರ್ಥಿಗಳ ಅನುಕೂಲಕ್ಕಾಗಿ ನಿರ್ಮಿಸಿರುವ ಕೇಂದ್ರಗಳು ಮತ್ತು ಮೆಡಿಕಲ್‌ ಸೆಂಟರ್‌ ಪರಿಶೀಲನೆ ನಡೆಸಿ ಅಲ್ಲಿನ ಸಿಬಂದಿಗಳಿಂದ ಮಾಹಿತಿಯನ್ನೂ ಪಡೆದರು.

ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ದೇವಾಯದ ಭೇಟಿ ಬಳಿಕ ಡೆಹರಾಡೂನ್‌ನಲ್ಲಿ  ಬಾಬಾ ರಾಮ್‌ದೇವ್‌ ಒಡೆತನದ ಪತಂಜಲಿ ಉತ್ಪನ್ನಗಳ ಸಂಶೋಧನ ಕೇಂದ್ರಕ್ಕೆ ಚಾಲನೆ ನೀಡಲಿದ್ದಾರೆ.

ಪ್ರವಾಹ ಸಂಭವಿಸಿದ್ದ ಬಳಿಕ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮೋದಿ ಅವರು ತಕ್ಷಣ ಭೇಟಿಗೆ ಮುಂದಾಗಿದ್ದರು. ಆದರೆ ಅಂದಿನ ವಿಜಯ್‌ ಬಹುಗುಣ ನೇತೃತ್ವದ ಉತ್ತರಾಖಂಡದ ಕಾಂಗ್ರೆಸ್‌ ಸರ್ಕಾರ ಮೋದಿ ಅವರ ಹೆಲಿಕ್ಯಾಪ್ಟರ್‌ ಇಳಿಯಲು ಅವಕಾಶ ನೀಡಿರಲಿಲ್ಲ. ಭದ್ರತೆಯ ದೃಷ್ಟಿಯಿಂದ ಯಾವುದೇ ಮುಖ್ಯಮಂತ್ರಿಗಳಿಗೆ ಇಳಿಯಲು ಅವಕಾಶ ನೀಡುವುದಿಲ್ಲ ಎಂದು ಬಹುಗುಣ ಹೇಳಿದ್ದರು.

ಮೋದಿ ಅವರು ಆರ್‌ಎಸ್‌ಎಸ್‌ ಪ್ರಚಾರಕರಾಗಿದ್ದ ವೇಳೆ ಕೇದಾರನಾಥ ದೇವಾಲಯದ ಬಳಿ ಗುಹೆಯೊಂದರಲ್ಲಿ ಆಧ್ಯಾತ್ಮಿಕ ಸಾಧನೆ ಮಾಡಿದ್ದರು ಎಂದು ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ.

No Comments

Leave A Comment