Log In
BREAKING NEWS >
ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಶಿರೂರು ಶ್ರೀನಾಮಪತ್ರ ಸಲ್ಲಿಕೆ.....ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

118 ಪಾಯಿಂಟ್‌ ಗಳಿಕೆ- ಐಸಿಸಿ ಟಿ20 ರ‍್ಯಾಂಕ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದ ಭಾರತ ತಂಡ

ದುಬೈ: ಐಸಿಸಿ ಟಿ20 ಅಂತರರಾಷ್ಟ್ರೀಯ ತಂಡಗಳ ವಾರ್ಷಿಕ ರ‍್ಯಾಂಕ್‌ನಲ್ಲಿ ಭಾರತ ತಂಡ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

2017ರ ಮೇ 1ರ ವಾರ್ಷಿಕ ಪರಿಷ್ಕೃತ ಪಟ್ಟಿಯಲ್ಲಿ ಭಾರತ ತಂಡ ಆರು ಪಾಯಿಂಟ್‌ಗಳ ಹಿನ್ನಡೆ ಕಂಡಿದೆ. ಭಾರತ ತಂಡ 118 ಪಾಯಿಂಟ್‌ ಗಳಿಸಿದೆ.

ಇಂಗ್ಲೆಂಡ್‌ ತಂಡ ಎರಡನೇ ಸ್ಥಾನದಲ್ಲಿ, ಪಾಕಿಸ್ತಾನ ತಂಡ ಮೂರನೇ ಸ್ಥಾನದಲ್ಲಿದ್ದು, ಎರಡೂ ತಂಡಗಳು ತಲಾ 121 ಪಾಯಿಂಟ್‌ ಗಳಿಸಿವೆ.

ಐದು ಪಾಯಿಂಟ್‌ ಗಳಿಸುವ ಮೂಲಕ ಪಾಕಿಸ್ತಾನ 121 ಪಾಯಿಂಟ್‌ಗಳೊಂದಿಗೆ ಇಂಗ್ಲೆಂಡ್‌ ತಂಡವನ್ನು ಸರಿಗಟ್ಟಿದೆ.

125 ಪಾಯಿಂಟ್‌ ಗಳಿಸಿರುವ ನ್ಯೂಜಿಲೆಂಡ್‌ ತಂಡ ರ‍್ಯಾಂಕ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

10 ತಂಡಗಳ ರ‍್ಯಾಂಕ್‌ ಪಟ್ಟಿ
* ನ್ಯೂಜಿಲೆಂಡ್‌– 125 ಪಾಯಿಂಟ್(–2ಪಾಯಿಂಟ್‌)
* ಇಂಗ್ಲೆಂಡ್‌– 121 ಪಾಯಿಂಟ್(+7ಪಾಯಿಂಟ್‌)
* ಪಾಕಿಸ್ತಾನ– 121 ಪಾಯಿಂಟ್(+5 ಪಾಯಿಂಟ್‌)
* ಭಾರತ– 118 ಪಾಯಿಂಟ್‌(–6ಪಾಯಿಂಟ್‌)
* ದಕ್ಷಿಣ ಆಫ್ರಿಕ– 111 ಪಾಯಿಂಟ್(–6ಪಾಯಿಂಟ್‌)
* ಆಸ್ಟ್ರೇಲಿಯಾ– 110 ಪಾಯಿಂಟ್(–1ಪಾಯಿಂಟ್‌)
* ವೆಸ್ಟ್‌ ಇಂಡಿಸ್‌– 109 ಪಾಯಿಂಟ್(–3ಪಾಯಿಂಟ್‌)
* ಶ್ರೀಲಂಕಾ– 95 ಪಾಯಿಂಟ್(–4ಪಾಯಿಂಟ್‌)
* ಆಫ್ಘಾನಿಸ್ತಾನ– 90 ಪಾಯಿಂಟ್(+6ಪಾಯಿಂಟ್‌)
* ಬಾಂಗ್ಲಾದೇಶ– 78 ಪಾಯಿಂಟ್(+4ಪಾಯಿಂಟ್‌)

No Comments

Leave A Comment