Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಉಡುಪಿ: ಸಾಧಕರಿಗೆ ಭಗೀರಥ ಪ್ರೇರಪಣೆಯಾಗಲಿ-ದಿನಕರ ಬಾಬು

ಉಡುಪಿ: ಎಲ್ಲೆಡೆ ನೀರಿನ ಕೊರತೆ, ಬರದ ಸಂದರ್ಭದಲ್ಲಿ  ಶ್ರೀ ಭಗೀರಥ ಮಹರ್ಷಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಭಗೀರಥನ ಪ್ರಯತ್ನ ಮತ್ತು ಗಂಗೆ ಭುವಿಗಿಳಿದದ್ದು ನಮಗೆಲ್ಲರಿಗೂ ನೀರಿನ ಸಮಸ್ಯೆ ಎದುರಿಸಲು ಪ್ರೇರಪಣೆಯಾಗಲಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಹೇಳಿದರು.

ಅವರಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಡುಪಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ‘ಶ್ರೀ ಭಗೀರಥ ಮಹರ್ಷಿ ಜಯಂತಿ’ ಆಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.

ನೀರು ಲಭ್ಯತೆ ಇಂದು ಸವಾಲಾಗಿ ಪರಿಣಮಿಸಿದ್ದು ನೀರು ನಿರ್ವಹಣೆ ಮತ್ತು ಛಲಬಿಡದ ಪ್ರಯತ್ನಕ್ಕೆ ಆಚರಣೆ ಶಕ್ತಿ ತುಂಬಲಿ ಎಂದು ಅವರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಪೂರ್ಣಪ್ರಜ್ಞ ಕಾಲೇಜಿನ ಡಾ ಶ್ರೀಕಾಂತ ಸಿದ್ಧಾಪುರ ಅವರು, ಭಗೀರಥ ಪ್ರಯತ್ನದ ವ್ಯಾಖ್ಯಾನ ಇಂದಿಗೂ ನಮ್ಮ ಜೀವನದಲ್ಲಿ ಎಷ್ಟು ಪ್ರಸ್ತುತ ಎಂದು ವಿವರಿಸಿದರಲ್ಲದೆ, ಅವರು ನೀಡಿದ ಮೌಲ್ಯಗಳ ಅಳವಡಿಕೆಯಿಂದ ಇಂದೂ ಜೀವನವನ್ನು ಸುಖಕರವಾಗಿಸಬಹುದು ಎಂದು ವಿವರಿಸಿದರು.

ತಾನು ಕಾಣದ ಹಿರಿಯ ತಲೆಮಾರಿಗೋಸ್ಕರ ಭಗೀರಥ ಮಾಡಿದ ತಪಸ್ಸು, ಇಂದು ನಾವು ಹಿರಿಯರನ್ನು ನಡೆಸಿಕೊಳ್ಳುತ್ತಿರುವ ರೀತಿ, ಅಂದು ಆಕಾಶದಿಂದ ಗಂಗೆಯನ್ನು ಭುವಿಗೆ ತಂದು ತಮ್ಮ ಮುಂದಿನ ತಲೆಮಾರಿನ ಹಿತಕಾಯ್ದುಕೊಂಡ ಋಷಿಗಳು, ಇಂದು ಭವಿಷ್ಯಕ್ಕೆ ಪರಿಸರವನ್ನು ಕಾಪಿಡದೆ ಪಾತಾಳದಿಂದ ನೀರು ತರುವ ಪ್ರಯತ್ನ ವಿಪರ್ಯಾಸ ಎಂದು ಉಪನ್ಯಾಸಕರು ಹೇಳಿದರು.

ಪ್ರಯತ್ನದಿಂದ ಏನನ್ನೂ ಸಾಧಿಸಬಹುದು ಎಂಬುದರ ದ್ಯೋತಕವಾಗಿ ನಿಂತಿರುವ ಭಗೀರಥ ನಮ್ಮೆಲ್ಲರಿಗೆ ಸಾಧನೆಗೆ ಪ್ರೇರಕವಾಗಲಿ ಆಡದೆಯೆ ಮಾಡಿ ತೋರಿಸಿದ ಇವರು ಮಾರ್ಗದರ್ಶಕರಾಗಲಿ ಎಂದು ಹೇಳಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಅಪರ ಜಿಲ್ಲಾಧಿಕಾರಿ ಅನುರಾಧ ಜಿ ಅವರು ಮಾತನಾಡಿದರು. ಉಡುಪಿ ತಹಸೀಲ್ದಾರ್ ಮಹೇಶ್ಚಂದ್ರ ಸ್ವಾಗತಿಸಿದರು. ಸಿಪಿಒ ಶ್ರೀನಿವಾಸ ರಾವ್ ವಂದಿಸಿದರು. ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

No Comments

Leave A Comment