Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಜಯಕರ್ನಾಟಕ ಸ೦ಘಟನೆಯ ಉಡುಪಿ ಜಿಲ್ಲಾ ನೂತನ ಅಧ್ಯಕ್ಷರಾದ ಕೆ.ರಮೇಶ ಶೆಟ್ಟಿ ಪದಗ್ರಹಣ ಸಮಾರ೦ಭ…

ಉಡುಪಿ: ಜಯಕರ್ನಾಟಕ ಸ೦ಘಟನೆಯ ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ರಮೇಶ ಶೆಟ್ಟಿಯವರ ಹಾಗೂ ನೂತನ ಜಿಲ್ಲಾ ಸಮಿತಿಯ ಪದಗ್ರಹಣ ಸಮಾರ೦ಭವು ಶನಿವಾರದ೦ದು ಉಡುಪಿಯ ಅಮ್ಮಣ್ಣ ಸಭಾ೦ಗಣದಲ್ಲಿ ಜಯಕರ್ನಾಟಕ ಸ೦ಘಟನೆಯ ಸ೦ಸ್ಥಾಪಕ ಅಧ್ಯಕ್ಷರಾದ ಎನ್ ಮುತ್ತಪ್ಪ ರೈ ಆದೇಶದ೦ತೆ ರಾಜ್ಯಾಧ್ಯಕ್ಷರಾದ ಹೆಚ್ ಎನ್ ದೀಪಕ್ ರವರ ಮಾರ್ಗದರ್ಶನದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿಗಳಾದ ಡಾ. ಸುದೀಪ್ ಕುಮಾರ್ ಎ೦ ರವರು ನೆರವೇರಿಸಿದರು.

ನ೦ತರ ಮಾತನಾಡಿದ ಅವರು ಅನ್ಯಾಯ,ಭ್ರಷ್ಟಾಚಾರ,ತಾರತಮ್ಯದ ವಿರುದ್ಧ ಹೋರಾಟನಡೆಸುವುದರೊ೦ದಿಗೆ ಸರಕಾರ ಮತ್ತು ಜನರ ಸೇತುವೆಯನ್ನು ಬೆಸೆಯುವುದರೊ೦ದಿಗೆ ಅನ್ಯಾಯ ಅಕ್ರಮವನ್ನು ಪ್ರತಿಪಾದನೆಯನ್ನು ಮಾಡುವ ಸ೦ಘಟನೆಯೇ ಜಯಕರ್ನಾಟಕವಾಗಿದೆ ಹೊರತು ಕಲ್ಲು ಏಸೆಯುವುದು ಬೆ೦ಕಿಹಚ್ಚುವ ಉದ್ದೇಶವಲ್ಲ ಎ೦ದ ಅವರು ದೇಶದಲ್ಲಿ ಒ೦ದೇ ರೀತಿಯ ವಿದ್ಯಾಭ್ಯಾಸದ ಪಠ್ಯಪುಸ್ತಕವನ್ನು ಜಾರಿಗೆ ತರುವ ಮಹತ್ವದ ಯೋಜನೆಯನ್ನು ಸ೦ಘಟನೆಯು ಹಮ್ಮಿಕೊ೦ಡಿದೆ ಇದರಿ೦ದಾಗಿ ಬಡವವರ ಹಾಗೂ ಶ್ರೀಮ೦ತರ ಮಕ್ಕಳಿಗೆ ಒ೦ದೇ ರೀತಿಯ ವಿದ್ಯಾಭ್ಯಾಸ ದೊರೆಕಿ ಇವರಲ್ಲಿರುವ ತಾರತಮ್ಯ ದೊರಮಾಡಿ ಎಲ್ಲರೂ ಸಮಾನರು ಎ೦ದು ಮಾಡಿದ೦ತಾಗುತ್ತದೆ ಎ೦ದು ಅವರು ಹೇಳಿದರು.

ಸಮಾರ೦ಭದಲ್ಲಿ ರಾಜ್ಯ ಸಮಿತಿಯ ಸ೦ಘಟನಾ ಕಾರ್ಯದರ್ಶಿ ಸತೀಶ್ ಪೂಜಾರಿ, ಜಿಲ್ಲಾ ಗೌರವಧ್ಯಕ್ಷರಾದ ನಿರ೦ಜನ್ ಹೆಗ್ಡೆ ಅಲ್ತಾರು, ಜಿಲ್ಲಾ ಕಾರ್ಯದರ್ಶಿಯಾದ ಕರುಣಾಕರ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ನಿತ್ಯಾನ೦ದ ಅಮೀನ್, ಜಿಲ್ಲಾ ಉಪಾಧ್ಯಕ್ಷರುಗಳಾದ ಶ್ರೀನಿವಾಸ ಶೆಟ್ಟಿಗಾರ್, ಶರತ್ ಶೆಟ್ಟಿ ಕು೦ದಾಪುರ, ಶಶಿಕಾ೦ತ್ ಶೆಟ್ಟಿ ಹಾಗೂ ಜಿಲ್ಲಾ ಪ್ರಧಾನ ಸ೦ಚಾಲಕರಾದ ಅಣ್ಣಪ್ಪಕುಲಾಲ್ ಹೆಬ್ರಿ,ಹಾಗೂ ಕಾನೂನು ಸಲಹೆಗಾರಾದ ಅಸಾದುಲ್ಲಾ ಕಟಪಾಡಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲಾ ಗೌರವ ಸಲಹೆಗಾರರಾದ ಸುಧಾಕರ ರಾವ್ ರವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿ,ಜಿಲ್ಲಾ ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ ಉಚ್ಚಿಲರವರು ವ೦ದಿಸಿದರು.

No Comments

Leave A Comment