Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ಈಶ್ವರಪ್ಪ ಬಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಶಾಕ್: ಬಿಜೆಪಿ ಕಚೇರಿಯ ಕಂಪ್ಯೂಟರ್ ಆಪರೇಟರ್ ಮಲ್ಲಿಕಾರ್ಜುನ್ ವಜಾ

ಬೆಂಗಳೂರು: ಈಶ್ವರಪ್ಪ ಬಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಶಾಕ್​​ ನೀಡಿದ್ದಾರೆ. ಆರ್​​ಎಸ್​ಎಸ್​ ಮುಖಂಡ ಸಂತೋಷ್​ ಆಪ್ತನಾಗಿದ್ದ ಮಲ್ಲಿಕಾರ್ಜುನ್​ ಎಂಬಾತನ್ನ ಯಡಿಯೂರಪ್ಪ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮಲ್ಲಿಕಾರ್ಜುನ್​ ಕಳೆದ 10 ವರ್ಷಗಳಿಂದ ಬಿಜೆಪಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್​​​​​​ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅತೃಪ್ತರ ಸಮಾವೇಶದ ವೇಳೆಯಲ್ಲಿ ಮಲ್ಲಿಕಾರ್ಜುನ್​ ಸಹಕಾರ ನೀಡಿದ್ದನು ಎಂಬ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಮಲ್ಲಿಕಾರ್ಜುನ್​ ಸಮಾವೇಶ ಕರ ಪತ್ರ ತಯಾರಿಕೆ, ಕೆಲ ನಾಯಕರಿಗೆ ಮೇಲ್ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಈಗ ಮಲ್ಲಿಕಾರ್ಜುನ್​ನನ್ನು ಬಿಜೆಪಿ ಕಚೇರಿ ಕೆಲಸದಿಂದ ವಜಾಗೊಳಿಸಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

No Comments

Leave A Comment