Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಖ್ಯಾತ ಸೂಫಿ ಗಾಯಕಿ ಬೇಗಂ ಯಮನ್ ವಿಧಿವಶ

ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಸೂಫಿ ಗಾಯಕಿ ಬೇಗಂ ಯಮನ್ ಅವರು ವಿಧಿವಶರಾಗಿದ್ದಾರೆ.

ಪ್ರಸಿದ್ಧ ಸಿತಾರ್ ವಾದಕ ಉಸ್ತಾದ್ ವಿಲಾಯತ್ ಖಾನ್ ಅವರ ಪುತ್ರಿಯಾಗಿರುವ ಬೇಗಂ ಯಮನ್ ಬಹು ಅಂಗಾಂಗಗಳ ವೈಪಲ್ಯತೆಯಿಂದ ಬಳಲುತ್ತಿದ್ದು ಲೂಧಿಯಾನದ ಕ್ರಿಸ್ಚಿಯನ್ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಬೆಳಗ್ಗೆ 3 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಮುಂಬೈನಲ್ಲಿ ಜನಸಿದ ಬೇಗಂ ಯಮನ್ ಅವರು ಉಸ್ತಾದ್ ಇನಾಯತ್ ಖಾನ್ ಅವರ ಮೊಮ್ಮಗಳು. ಇನಾಯಕ್ ಖಾನ್ ಪರಂಪರೆ ನಿರಂತರವಾಗಿ ಸಂಗೀತದಲ್ಲಿ ತೊಡಗಿಕೊಂಡಿದೆ. ಬೇಗಂ ಯಮನ್ ಅವರ ಸಹೋದರ ಮತ್ತು ಸಹೋದರಿ ಸಹ ಸೂಫಿ ಗಾಯಕರಾಗಿದ್ದಾರೆ.

No Comments

Leave A Comment