Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಏಕಕಾಲದಲ್ಲಿ ಮೂರು ಸಿನಿಮಾ: ಗಾಂಧಿ ಎಂಟರ್‌ಟೈನ್‌ಮೆಂಟ್‌ ಫ್ಯಾಕ್ಟರಿ

ಒಬ್ಬೊಬ್ಬರಿಗೆ ಒಂದೊಂದು ಫೈಲು ಕೊಟ್ಟರು ಪೂಜಾ ಗಾಂಧಿ. ಮಿಸ್‌ ಮಾಡದೇ ಖಂಡಿತಾ ಬರಬೇಕು ಅಂತ ಹೇಳುತ್ತಲೇ ಆಹ್ವಾನವಿತ್ತರು. ಎಲ್ಲರೂ ಆಹ್ವಾನ ಪತ್ರಿಕೆ ಕೊಟ್ಟು ಕರೆಯುತ್ತಾರೆ, ಇದೇನು ಪೂಜಾ ಫೈಲ್‌ ಕೊಡುತ್ತಿದ್ದಾರಲ್ಲ ಎಂದರೆ ಆ ಫೈಲ್‌ನಲ್ಲಿದ್ದುದು ಆಹ್ವಾನ ಪತ್ರಿಕೆಯೇ. ಇನ್ನೂ ಸರಿಯಾಗಿ ಹೇಳಬೇಕೆಂದರೆ, ಆಹ್ವಾನ  ಪತ್ರಿಕೆಯನ್ನೂ ಫೈಲ್‌ನಂತೆಯೇ ಮಾಡಿಸಿ ಹಂಚಿದ್ದಾರೆ ಪೂಜಾ ಗಾಂಧಿ. ಅಂದಹಾಗೆ, ಪೂಜಾ ಗಾಂಧಿ ಆಹ್ವಾನ ಪತ್ರಿಕೆ ಕೊಟ್ಟಿದ್ದು ತಮ್ಮ ನಿರ್ಮಾಣದ ಹೊಸ ಚಿತ್ರಗಳ ಮುಹೂರ್ತ ಸಮಾರಂಭದ್ದು. ಪೂಜಾ ಎಂಟರ್‌ಟೈನ್‌ಮೆಂಟ್‌ ಫ್ಯಾಕ್ಟರಿ ಎಂಬ ಪ್ರೊಡಕ್ಷನ್‌ ಹೌಸ್‌ ಹುಟ್ಟು ಹಾಕಿ 10 ಚಿತ್ರಗಳನ್ನು ನಿರ್ಮಿಸುವುದಕ್ಕೆ ಯೋಚಿಸುತ್ತಿರುವುದು, ಆ ಪೈಕಿ ಮೂರು ಸದ್ಯದಲ್ಲೇ ಸೆಟ್ಟೇರುತ್ತಿರುವುದು ಎಲ್ಲರಿಗೂ ಗೊತ್ತಿದೆ. ಪೂಜಾ ಆಹ್ವಾನ ಕೊಟ್ಟಿದ್ದು ಸಹ ಅದೇ ಮೂರು ಚಿತ್ರಗಳ ಮುಹೂರ್ತ ಸಮಾರಂಭದ್ದು. ಮೇ ಎರಡಕ್ಕೆ ಒಂದೇ ವೇದಿಕೆಯಲ್ಲಿ ಮೂರೂ ಚಿತ್ರಗಳು ಪ್ರಾರಂಭವಾಗಲಿದ್ದು, ಆ ಕುರಿತು ಮಾಹಿತಿ ನೀಡುವುದಕ್ಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆಹ್ವಾನಿಸುವುದಕ್ಕೆ ಪತ್ರಿಕಾಗೋಷ್ಠಿ ಕರೆದಿದ್ದರು ಪೂಜಾ. ಆಹ್ವಾನ ಪತ್ರಿಕೆಯನ್ನೇನೋ ಅವರು ತುಂಬು ಪ್ರೀತಿಯಿಂದ ಕೊಟ್ಟರು. ಆದರೆ, ಮಾಹಿತಿಯನ್ನು ಮಾತ್ರ
ಮುಂದೆ ಹೇಳ್ತೀನಿ ಎಂದು ತೇಲಿಸಿದರು.

“ಉತಾಹಿ’ ಅಂದರೇನು?
ನನಗೆ ಗೊತ್ತಿಲ್ಲ. ನಿರ್ದೇಶಕ ಜೆಡಿ ಅವರನ್ನ ಕೇಳಿ. ಅವರು ಮುಹೂರ್ತದಲ್ಲಿ ಸಿಗ್ತಾರಲ್ವಾ. ಆಗ ಕೇಳಿ.

ಏನು ಅಂತ ಗೊತ್ತಿಲ್ಲದೇ ಸಿನಿಮಾ ಮಾಡೋಕೆ ಒಪ್ಪಿದ್ರಾ?
ಜೆಡಿ ತುಂಬಾ ಸಬೆjಕ್ಟ್ಗಳನ್ನ ಹೇಳಿದ್ರು. ಇದು ಇಷ್ಟ ಆಯ್ತು. ಇದರ ಜೊತೆಗೆ ಇನ್ನೊಂದೆರೆಡು ಸಹ ಇಷ್ಟ ಆಯ್ತು. ಅದಕ್ಕೆ ಮಾಡ್ತಾ ಇದ್ದೀನಿ. ಇದಕ್ಕೂ ಮುನ್ನ ಶುರುವಾಗಬೇಕಿದ್ದ

“ರಾವಣಿ’ ಏನಾಯ್ತು?
ಅದು ಕಾರಣಾಂತರಗಳಿಂದ ಆಗಲಿಲ್ಲ.

ಏನಾದರೂ ಸಮಸ್ಯೆನಾ?
ನಾನು ಮತ್ತು ಚಂದ್ರಚೂಡ್‌ ಇಬ್ಬರೂ ಒಳ್ಳೆಯ ಸ್ನೇಹಿತರು. ಕಾರಣಾಂತರಗಳಿಂದ ಆ ಸಿನಿಮಾ ಆಗಲಿಲ್ಲ ಅಷ್ಟೇ. ಅದು ಬಿಟ್ಟರೆ
ನಮ್ಮಿಬ್ಬರ ಮಧ್ಯೆ ಯಾವುದೇ ಸಮಸ್ಯೆ ಇಲ್ಲ. ಸದ್ಯಕ್ಕೆ ಆ ಸಿನಿಮಾ ಆಗುತ್ತಿಲ್ಲ. ಮುಂದೆ ನೋಡೋಣ.

ಕಳಸಾ-ಬಂಡೂರಿ ಕುರಿತು ಸಾಕ್ಷ್ಯಚಿತ್ರ ಮಾಡೋಕೆ ಹೊರಟಿದ್ದಿರಿ?
ಅದನ್ನ ಇನ್ನೊಂದು ವೇದಿಕೇಲಿ ಮಾತಾಡ್ತೀನಿ. ಈಗ ಬರೀ ಎಂಟರ್‌ಟೈನ್‌ಮೆಂಟ್‌ ಫ್ಯಾಕ್ಟರಿ ಬಗ್ಗೆ ಮಾತಾಡೋಣ.

“ದಂಡುಪಾಳ್ಯ 3’ನಲ್ಲಿ ಹುಡುಗಿ ಜೊತೆಗೆ ಕಿಸ್ಸಿಂಗ್‌ ಸೀನ್‌ ಇದೆಯಂತೆ?
ಹೌದು. ಆ ಬಗ್ಗೆ ನಿರ್ದೇಶಕರನ್ನ ಕೇಳಿ. ನನಗೆ ಕನ್ವಿನ್ಸ್‌ ಆಯಿತು. ಅದಕ್ಕೆ ಒಪ್ಪಿಕೊಂಡೆ. ಯಾಕೆ ಆ ಕಿಸ್ಸಿಂಗ್‌ ಸೀನ್‌ ಅಂತ ಗೊತ್ತಾಗಬೇಕಿದ್ದರೆ ಸಿನಿಮಾ ನೋಡಿ.

ಎಲ್ಲಾ ಸರಿ, ಮದುವೆ ವಿಷಯ ಏನಾಯ್ತು?
ಸಿನಿಮಾ ಮುಹೂರ್ತಕ್ಕೇ ಪ್ರಸ್‌ ಮೀಟ್‌ ಮಾಡಿ ಆಹ್ವಾನ ಪತ್ರಿಕೆ ಕೊಡೋವಾಗ, ಮದುವೆಗೆ ಕರೆಯೋಲ್ವಾ? ಇದಕ್ಕಿಂತ 100 ಪರ್ಸೆಂಟ್‌ ದೊಡ್ಡದಾಗಿ ಮಾಡ್ತೀನಿ. ಮದುವೆ ಇನ್ವಿಟೇಷನ್‌ ದೇ ಒಂದು ಫೈಲ್‌ ಕೊಡುತ್ತೀನಿ. ಹೀಗೆ ಪೂಜಾ ಟಕ್‌ಟಕ್‌ ಅಂತ ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದರು. ಈ ಮಧ್ಯೆ ಗೊತ್ತಾದ ವಿಷಯವೆಂದರೆ, ಈ ಮೂರೂ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆಯೆಂದು. “ಉತಾಹಿ’ ಲವ್‌ಸ್ಟೋರಿ, “ಬ್ಲಾಕ್‌ ವರ್ಸಸ್‌ ವೈಟ್‌’ ಒಂದು ಸೋಷಿಯಲ್‌ ಡ್ರಾಮಾ ಮತ್ತು “ಭೂ’
ಹಾರರ್‌ ಚಿತ್ರವಂತೆ. ಈ ಪೈಕಿ ಬಹಳ ದಿನಗಳ ನಂತರ ಲವ್‌ಸ್ಟೋರಿಯಲ್ಲಿ ನಟಿಸುತ್ತಿರುವ ಬಗ್ಗೆ ಖುಷಿಯಾಗಿದ್ದಾರೆ ಪೂಜಾ ಗಾಂಧಿ. “ಬಹಳ ದಿನಗಳಾಗಿತ್ತು ನಾನು ಲವ್‌ಸ್ಟೋರಿಯೊಂದರಲ್ಲಿ ಕಾಣಿಸಿಕೊಂಡು. ಇತ್ತೀಚೆಗೆಲ್ಲಾ ಬೇರೆ ತರಹದ ಸಿನಿಮಾಗಳಲ್ಲೇ ಜಾಸ್ತಿ ಕಾಣಿಸಿಕೊಳ್ಳುತ್ತಿದ್ದೆ. “ಉತಾಹಿ’ಯಲ್ಲಿ ಆ ಚಾನ್ಸ್‌ ಸಿಕ್ಕಿದೆ. ಇನ್ನು “ಭೂ’ನಲ್ಲಿ ನಾನು ನಟಿಸುತ್ತಿಲ್ಲ. ಆ ಚಿತ್ರದಲ್ಲಿ ಹೊಸಬರನ್ನ ಪರಿಚಯ ಮಾಡ್ತಿದ್ದೀವಿ. “ಬ್ಲಾಕ್‌ ವರ್ಸಸ್‌ ವೈಟ್‌’ನಲ್ಲಿ ಇಬ್ಬರು ಹುಡುಗರು, ಹುಡುಗಿಯರು ಇರುತ್ತಾರೆ. “ಉತಾಹಿ’ಯಲ್ಲಿ 50 ಜನರನ್ನ ಪರಿಚಯ
ಮಾಡ್ತಿದ್ದೀನಿ. ನಾನು ಚಿತ್ರರಂಗಕ್ಕೆ ಬಂದಾಗ ಸ್ಟ್ರಗಲ್‌ ಮಾಡಿದ್ದೆ. ಕನ್ನಡದಲ್ಲಿ ನಟಿಸೋ ಮುಂಚೆ ಗುಜರಾತಿ ಮತ್ತು ಬೆಂಗಾಲಿ ಚಿತ್ರಗಳಲ್ಲಿ ನಟಿಸಿದ್ದೆ. ಈಗ ಬಹಳಷ್ಟು ಪ್ರತಿಭಾವಂತರಿದ್ದಾರೆ. ಅವರನ್ನೆಲ್ಲಾ ಪರಿಚಯಿಸುತ್ತಿದ್ದೀನಿ’ ಎನ್ನುತ್ತಾರೆ ಪೂಜಾ ಗಾಂಧಿ

No Comments

Leave A Comment