Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಕಾಡಬೆಟ್ಟು:ಉಚಿತ ಆರೋಗ್ಯ ತಪಾಸಣಾ ಶಿಬಿರವು

ಉಡುಪಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ, ಹಳೆ ವಿದ್ಯಾರ್ಥಿ ಸಂಘ ಟಿ.ಎ.ಪೈ ಮಾಡರ್ನ್ ಶಾಲೆ ಕಾಡಬೆಟ್ಟು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ,ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಮತ್ತು ತಾಲೂಕು ಆರೋಗ್ಯಾಧಿಕಾರಿಯವರ ಕಚೇರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಇತ್ತೀಚೆಗೆ ಟಿ.ಎ.ಪೈ ಮಾಡರ್ನ್ ಶಾಲೆ ಕಾಡಬೆಟ್ಟುವಿನಲ್ಲಿ ನಡೆಸಲಾಯಿತು.

ಸ್ಥಳೀಯ ನಗರ ಸಭಾ ಸದಸ್ಯರಾದ ಶ್ರೀಯುತ ಯಶ್‍ಪಾಲ್ ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಗುಣಮಟ್ಟದ ಆರೋಗ್ಯಸೇವೆಯನ್ನು ಎಲ್ಲರೂ ಪಡೆಯುವಂತಾಗಬೇಕು.ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಖಾಸಗಿ ಆಸ್ಪತ್ರೆಗಳು ಜಂಟಿಯಾಗಿ ಕಾಡಬೆಟ್ಟುವಿನಲ್ಲಿ ಇಂತಹ ಶಿಬಿರವನ್ನು ಏರ್ಪಡಿಸುವುದರ ಮೂಲಕ ಜನರ ಮನೆಬಾಗಿಲಿಗೆ ತೆರಳಿ ಆರೋಗ್ಯದ ಅರಿವನ್ನು ಮೂಡಿಸುವ ಹಾಗೂ ಶಿಬಿರದಲ್ಲಿ ಪತ್ತೆ ಹಚ್ಚಲಾದ ಗಂಭೀರ ಖಾಯಿಲೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಗುಣಮಟ್ಟ ಉಚಿತ ಚಿಕಿತ್ಸೆ ನೀಡುವ ಈ ಕಾರ್ಯ ಶ್ಲಾಘನೀಯ, ಜನರು ಆದಷ್ಟು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್.ಆರ್. ಶೆಣೈ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ವಹಿಸಿದ್ದು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಯುತ ನಾರಾಯಣ ಭಂಡಾರಿ, ಮಾಜಿ ನಗರ ಸಭಾ ಸದಸ್ಯರಾದ ಪ್ರಕಾಶ್ ಅಂದ್ರಾದೆ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಾವಿತ್ರಿ, ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಅಧ್ಯಕ್ಷರಾದ ಡಾ/ ವಿಜಯೇಂದ್ರ, ಸ್ಥಳೀಯರಾದ ಸೂರಿ ಕಾಡಬೆಟ್ಟು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರಾದ ಡಾ/ ಈಶ್ವರಿ ಮತ್ತು ಡಾ/ ಧನ್ಯ, ಕೆ,ಎಸ್ ಹೆಗ್ಡೆ ಅಸ್ಪತ್ರೆಯ ಕಾರ್ಡಿಯಾಲಜಿ ಡಿಪಾರ್ಟ್‍ಮೆಂಟ್‍ನ ಹೃದಯ ರೋಗ ತಜ್ಞರಾದ ಡಾ/ ರೇವತಿ , ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಜಿಲ್ಲಾ ಸಂಯೋಜಕರಾದ ಶ್ರೀ ಸಚ್ಚಿದಾನಂದ, ಅವರು ವೇದಿಕೆಯಲ್ಲಿದ್ದರು.

ತಾಲೂಕು ಆರೋಗ್ಯಾಧಿಕಾರಿಯವರಾದ ಡಾ/ ನಾಗರತ್ನ ಎಲ್ಲರನ್ನು ಸ್ವಾಗತಿಸಿ ವಂದನಾರ್ಪಣೆ ಮಾಡಿದರು.ಜನರಲ್ ಮೆಡಿಸಿನ್,ಹ್ರುದ್ರೋಗ,ಚರ್ಮರೋಗ,ಮೂಳೆರೋಗಕ್ಕೆ ಸಂಬಂದಿಸಿದ ತಜ್ಞ ವೈದ್ಯರುಗಳು ಶಿಬಿರದಲ್ಲಿ ಉಪಸ್ಥಿತರಿದ್ದು ಇಕೋ/ಇಸಿಜಿ,ಸ್ತ್ರೀರೋಗಕ್ಕೆ ಸಂಬಂದಿಸಿದ ತಪಾಸಣೆ,ಹಾಗೂ ಇತರ ತಪಾಸಣೆಗಳನ್ನು ನಡೆಸಿ ಸುವರ್ಣ ಆರೋಗ್ಯ ಸುರಕ್ಷಾ ಕಾರ್ಯಕ್ರಮದಡಿ ಅರ್ಹ ಫಲಾನುಭವಿಗಳನ್ನು ಉಚಿತ ಚಿಕಿತ್ಸೆಗಾಗಿ ನೋಂದಾಯಿತ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ರೆಫರ್ ಮಾಡಲಾಯಿತು. ಆಸುಪಾಸಿನ 150ಕ್ಕಿಂತಲೂ ಹೆಚ್ಚಿನ ಜನ ಹಾಗೂ ಕಾಲನಿಗಳ ಕಾರ್ಮಿಕರು ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು.

No Comments

Leave A Comment