Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

BJP ಬಿಕ್ಕಟ್ಟು; ಸಮಾವೇಶದಲ್ಲಿ BSY, ಈಶ್ವರಪ್ಪ ಬೆಂಬಲಿಗರ ಮಾರಾಮಾರಿ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿರುವ ಕೆಲವು ಮುಖಂಡರು ಗುರುವಾರ ಬೆಳಗ್ಗೆ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಸಂಘಟನೆ ಉಳಿಸಿ ಸಮಾವೇಶದಲ್ಲಿ ಬಿಎಸ್ ವೈ ಮತ್ತು ಈಶ್ವರಪ್ಪ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.

ಸಂಘಟನೆ ಉಳಿಸಿ ಸಮಾವೇಶದಲ್ಲಿ ಎಂಎಲ್ ಸಿ ಭಾನುಪ್ರಕಾಶ್ ಅವರು ವೇದಿಕೆ ಮೇಲೆ ನಿಂತು ಬಿಎಸ್ ವೈ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಂತೆಯೇ ಸಮಾವೇಶಕ್ಕೆ ನುಗ್ಗಿದ ಬಿಎಸ್ ವೈ ಬೆಂಬಲಿಗರು ಈಶ್ವರಪ್ಪ ಬೆಂಬಲಿಗರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆಯಿತು.

ಏಯ್ ನೀನೇ ಅಯೋಗ್ಯ, ಬಿಎಸ್ ವೈ ವಿರುದ್ಧ ಮಾತನಾಡಬೇಡ ಎಂದು ಭಾನುಪ್ರಕಾಶ್ ಗೆ ಬಿಎಸ್ ವೈ ಬೆಂಬಲಿಗ ಅವಾಜ್ ಹಾಕಿದ್ದ, ಈ ವೇಳೆಯಲ್ಲಿ ಮಾರಾಮಾರಿ ನಡೆದಿದೆ. ಆತನನ್ನು ಸಭೆಯಿಂದ ಹೊರಹಾಕಿ ಎಂದು ಭಾನುಪ್ರಕಾಶ್ ವೇದಿಕೆಯಿಂದಲೇ ಹುಕುಂ ಹೊರಡಿಸಿದ್ದರು. ಬಳಿಕ ಈಶ್ವರಪ್ಪ ಬೆಂಬಲಿಗರು ಆತನ ಕತ್ತಿನಪಟ್ಟಿ ಹಿಡಿದು ಹೊರಹಾಕಿದ್ದರು.

No Comments

Leave A Comment