Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಅರುಣಾಚಲ ಪ್ರದೇಶ: ಕಾಂಗ್ರೆಸ್ ನ 23 ಕೌನ್ಸಿಲರ್ ಗಳು ಬಿಜೆಪಿಗೆ

ಇಟಾನಗರ: ಇಟಾನಗರ ಮುನಿಸಿಪಲ್ ಕೌನ್ಸಿಲ್ ನ 23 ಕಾಂಗ್ರೆಸ್ ಸದಸ್ಯರು ಪಕ್ಷ ತೊರೆದು ಬಿಜೆಪಿ ಸೇರಲಿದ್ದಾರೆ. ಇಂದು ಸಂಜೆ ಮುಖ್ಯಮಂತ್ರಿ ಫೆಮಾಖಂಡು ಸಮ್ಮುಖದಲ್ಲಿ ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ.

ಇಟಾನಗರ ಮುನಿಸಿಪಲ್ ಕೌನ್ಸಿಲ್ ನಲ್ಲಿ ಒಟ್ಟು 30 ಸದಸ್ಯರಿದ್ದಾರೆ. ಅಧರಲ್ಲಿ 26 ಮಂದಿ ಕಾಂಗ್ರೆಸ್ ಸದಸ್ಯರು, ಅದರಲ್ಲಿ ಒಬ್ಬ ಸದಸ್ಯನನ್ನು ಪಕ್ಷದಿಂದ ಹೊರ ಹಾಕಿದ ಮೇಲೆ 25 ಮಂದಿ ಇದ್ದರು, ಅದರಲ್ಲಿ 23 ಕೌನ್ಸಿಲರ್ ಗಳು ಬಿಜೆಪಿ ಸೇರಲಿದ್ದಾರೆ.

ಪೆಮಾಖಂಡು ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ತಮಗೆ ವಿಶ್ವಾಸವಿದೆ ಎಂದು ಕೌನ್ಸಿಲರ್ ಗಳು ಹೇಳಿದ್ದಾರೆ. ತಮ್ಮ ಕುಟುಂಬಕ್ಕೆ ಅವರನ್ನು ಸಂತೋಷದಿಂದ ಸ್ವಾಗತಿಸುವುದಾಗಿ ಅರುಣಾಚಲ ಬಿಜೆಪಿ ಅಧ್ಯಕ್ಷ ತಪಿರ್ ಗಾವ್ ತಿಳಿಸಿದ್ದಾರೆ.

No Comments

Leave A Comment