Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಜುಲೈ ಅಂತ್ಯದೊಳಗೆ ತೆರಿಗೆ ಪರಿಷ್ಕರಿಸಲು ಗ್ರಾಮ ಪಂಚಾಯ್ತಿಗಳಿಗೆ ಆದೇಶ ಎತ್ತಿನಗಾಡಿ, ಸರಕು ತುಂಬಿದ ಚೀಲಕ್ಕೂ ಪಂಚಾಯ್ತಿ ತೆರಿಗೆ!

ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಡ, ಎತ್ತಿನಗಾಡಿ, ಮೋಟಾರು ವಾಹನ, ಬೈಕ್‌ಗಳ ಮಾಲೀಕರು ಇನ್ನು ಮುಂದೆ ಕಡ್ಡಾಯವಾಗಿ ತೆರಿಗೆ ಪಾವತಿಸಬೇಕು.

ಕರ್ನಾಟಕ ಪಂಚಾಯತ್‌ ರಾಜ್‌ ಕಾಯ್ದೆ– 1993ಕ್ಕೆ ಎರಡು ವರ್ಷದ ಹಿಂದೆ ತಂದಿರುವ ತಿದ್ದುಪಡಿ ಅನ್ವಯ ಎರಡು ವರ್ಷಕ್ಕೊಮ್ಮೆ ಕಾಯ್ದೆಯ ಅನುಸೂಚಿ 4ರಲ್ಲಿ ಉಲ್ಲೇಖಿಸಿರುವುದಕ್ಕೆ (ಪಟ್ಟಿಯಲ್ಲಿರುವಂತೆ) ಕಡಿಮೆ ಇಲ್ಲದಂತೆ ತೆರಿಗೆ ಪರಿಷ್ಕರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಆದೇಶ ಹೊರಡಿಸಿದೆ.

ಪರಿಷ್ಕೃತ ತೆರಿಗೆ ಜುಲೈ ತಿಂಗಳಿಂದ ಜಾರಿಗೆ ಬರಲಿದೆ.

ಈ ಹಿಂದೆ ಹಲವು ಬಾರಿ ಸುತ್ತೋಲೆ ಕಳುಹಿಸಿದರೂ ಗ್ರಾಮ  ಪಂಚಾಯ್ತಿಗಳು ತೆರಿಗೆ ವಸೂಲು ಮಾಡಿರಲಿಲ್ಲ. ಇದರಿಂದ ಗ್ರಾಮ ಪಂಚಾಯಿತಿಗಳಿಗೆ ದೈನಂದಿನ ವ್ಯವಹಾರಗಳಿಗೂ ರಾಜ್ಯ ಸರ್ಕಾರವೇ ಅನುದಾನ ನೀಡುತ್ತಿದೆ. ಹೊರೆ ತಪ್ಪಿಸಲು ಕಡ್ಡಾಯವಾಗಿ ತೆರಿಗೆ ಪರಿಷ್ಕರಿಸಿ, ಜಾರಿಗೊಳಿಸಲು ಸರ್ಕಾರ ಆದೇಶಿಸಿದೆ.

‘ಹೊಸ ಆದೇಶದ ಪ್ರಕಾರ, ತೆರಿಗೆ ಬಾಕಿದಾರರು, ಕಡಿಮೆ ತೆರಿಗೆ ಪಾವತಿದಾರರ ಆಸ್ತಿ ವಿವರಗಳನ್ನು ಪಂಚಾಯ್ತಿಗಳು ಸಿದ್ಧಪಡಿಸಿ, ಪರಿಷ್ಕೃತ ದರದಲ್ಲಿ ತೆರಿಗೆ ವಸೂಲು ಮಾಡಬೇಕು. ಇಲ್ಲದಿದ್ದರೆ, ಮುಂದಿನ ವರ್ಷದಿಂದ ಸರ್ಕಾರದ ಅನುದಾನವನ್ನು ಸಂಪೂರ್ಣ ನಿಲ್ಲಿಸಲಾಗುವುದು’ ಎಂದು  ಸೂಚಿಸಲಾಗಿದೆ.

No Comments

Leave A Comment