Log In
BREAKING NEWS >
ದೀಪ ಪ್ರಜ್ವಲಿಸುವುದರೊ೦ದಿಗೆ ಕಲ್ಯಾಣಪುರ ಭಜನಾ ಸಪ್ತಾಹ ಮಹೋತ್ಸವಕ್ಕೆ ಅಮ್ಮು೦ಜೆ ಗುರುಪ್ರಸಾದ್ ನಾಯಕ್ ರವರಿ೦ದ ಅದ್ದೂರಿಯ ಚಾಲನೆ........ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಹೆರ್ಗ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷರಾಗಿ ಸುಬ್ರಮಣ್ಯ ಪೈ ಆಯ್ಕೆ

ಮಣಿಪಾಲದ ಸುಬ್ರಮಣ್ಯ ಪೈ ಯವರನ್ನು ಭಾರತೀಯ ಜನತಾ ಪಾರ್ಟಿ ಹೆರ್ಗ ಶಕ್ತಿ ಕೇಂದ್ರದ ನೂತನ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು. ಉಡುಪಿ  ಬಿಜೆಪಿ ಕಾರ್ಯಾಲಯದಲ್ಲಿ ನಗರಾಧ್ಯಕ್ಷ ಪ್ರಭಾಕರ್ ಪೂಜಾರಿಯವರ ಅದ್ಯಕ್ಷತೆಯಲ್ಲಿ ಮತ್ತು ಮಾಜಿ ಶಾಸಕ ರಘುಪತಿ ಭಟ್ ರವರ ಉಪಸ್ಥಿತಿ ಯಲ್ಲಿ  ಹಾಗು ಈಶ್ವರನಗರ, ಮಣಿಪಾಲ, ಶೆಟ್ಟಿಬೆಟ್ಟು, ಸರಳೆಬೆಟ್ಟು,  ಪರ್ಕಳ ವಾರ್ಡ್ ನ ಕಾರ್ಯಕರ್ತರ ಸಮಕ್ಷಮದಲ್ಲಿ ನಡೆದ ಸಭೆಯಲ್ಲಿ ಅವಿರೋಧವಾಗಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ಹೇಮಂತ್ ಕುಮಾರ್  ಪರ್ಕಳ ಇವರನ್ನು ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕ  ಮಾಡಲಾಯಿತು.

ಇತರ  ನೂತನ ಪದಾಧಿಕಾರಿಗಳ ವಿವರಗಳು.

ಉಪಾದ್ಯಕ್ಷರುಗಳು

ಸಂಜಯ್ ಶೆಣೈ ಮಣಿಪಾಲ, ರಿಯಾ ನಾಯರ್ , ಶರತ್ ಶೆಟ್ಟಿ ಹೆರ್ಗ

ಕಾರ್ಯದರ್ಶಿಗಳು

ಸತೀಶ್.ಎನ್ , ಮಂಜುನಾಥ್ ನಾಯ್ಕ , ವಿಜಯ ಸರಳೆಬೆಟ್ಟು

ಸದಸ್ಯರುಗಳು

ಶೇಖರ್ ನಾಯ್ಕ , ದಿನೇಶ್ ಶೆಟ್ಟಿಗಾರ್ , ಧರಣೇಶ್ ಸಾಲಿಯಾನ್, ಗೋಪಾಲಕೃಷ್ಣ ನಾಯಕ್, ಹರೀಶ್ ಪೂಜಾರಿ, ರಮೇಶ್ ನಾಯಕ್, ಸದಾನಂದ ಪೂಜಾರಿ, ಮೀನಾಕ್ಷಿ ಪರ್ಕಳ, ನಟರಾಜ್ ಸರಳೆಬೆಟ್ಟು, ಸಮರ್ಥ್ ಮಣಿಪಾಲ, ನಾಗರಾಜ್, ಪ್ರತಾಪ್ ಜೈನ್,  ಲಿನೆಟ್ ಮರಿಯಾ ಡಿ, ಸೋಜಾ .

ಜಯರಾಮ್ ಶೆಟ್ಟಿಗಾರ್ ಮತ್ತು ದಿವಾಕರ್ ಶೆಟ್ಟಿ ಇವರನ್ನು ಉಡುಪಿ ನಗರ ಸಮಿತಿಯ ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು

ಮಾಜಿ ಶಾಸಕ ರಘುಪತಿ ಭಟ್ ರವರು ನೂತನ ಪದಾಧಿಕಾರಿಗಳಿಗೆ ಅವರ  ಪ್ರಮುಖ ಜವಾಬ್ದಾರಿಗಳ ಬಗ್ಗೆ ವಿವರಣೆ ನೀಡಿದರು. ನ.ಪ್ರಧಾನ ಕಾರ್ಯದರ್ಶಿ ಉಪೇಂದ್ರ ನಾಯಕ್ ರವರು ಸ್ವಾಗತಿಸಿ ಇನ್ನೋರ್ವ ಪ್ರ. ಕಾರ್ಯದರ್ಶಿ ಜಗದೀಶ್ ಆಚಾರ್ಯ ರವರು ವಂದಿಸಿದರು.

No Comments

Leave A Comment