Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಹುತಾತ್ಮ ಸಿಆರ್‍‍ಪಿಎಫ್‍ ಯೋಧರಿಗೆ ಶ್ರದ್ಧಾಂಜಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಗೆಲುವಿಗೆ ಸಂಭ್ರಮಾಚರಣೆ ಮಾಡದಿರಲು ಬಿಜೆಪಿ ನಿರ್ಧಾರ

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು  ಮೂರು ಪಾಲಿಕೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಈಗಾಗಲೇ ಕೆಲವು ವಾರ್ಡ್ ಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ  ಪಾಲಿಕೆಗಳಲ್ಲಿ ಬಹುಮತ ಸಾಧಿಸಿ ಗದ್ದುಗೆಗೇರುವುದು ಬಹುತೇಕ ಖಚಿತವಾಗಿದೆ.ಆದರೆ ಬಿಜೆಪಿ ಈ ಗೆಲುವಿನ ಸಂಭ್ರಮಾಚರಣೆ ಮಾಡದಿರಲು ತೀರ್ಮಾನಿಸಿದೆ.

ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿಗಳಿಂದ ಹತರಾದ 25 ಸಿಆರ್‍‍ಪಿಎಫ್ ಯೋಧರಿಗೆ ಗೌರವ ಸಲ್ಲಿಸಿ, ಸಂಭ್ರಮಾಚರಣೆ  ಕೈ ಬಿಡಲು ಬಿಜೆಪಿ ನಿರ್ಧಾರ ಮಾಡಿದೆ.

ಸುಕ್ಮಾದಲ್ಲಿನ ಘಟನೆ ನಿಮಿತ್ತ ನಾವು ಯಾವುದೇ ರೀತಿಯಲ್ಲಿ ಸಂಭ್ರಮಾಚರಣೆ ಮಾಡುವುದಿಲ್ಲ ಎಂದು ಬಿಜೆಪಿ ವಕ್ತಾರ ಅಮನ್ ಸಿನ್ಹಾ ಹೇಳಿದ್ದಾರೆ.

No Comments

Leave A Comment