Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಹ್ಯಾಪಿ ಟೈಮ್ಸ್‌! ಹೊಸ ವರ್ಷ; ಹೊಸ ಸೃಷ್ಟಿ

ಬಿ.ಸಿ.ಪಾಟೀಲ್‌ ನಿರ್ಮಾಣದ, ಪನ್ನಗ ನಿರ್ದೇಶನದ “ಹ್ಯಾಪಿ ನ್ಯೂ ಇಯರ್‌’ ಚಿತ್ರ ಮೇ 5 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಬಿ.ಸಿ.ಪಾಟೀಲ್‌ ಮಗಳು ಸೃಷ್ಟಿ ಪಾಟೀಲ್‌ ನಾಯಕಿಯಾಗಿ ಎಂಟ್ರಿಕೊಡುತ್ತಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹಿಟ್‌ ಆಗಿದ್ದು, ಚಿತ್ರತಂಡ ಖುಷಿಯಾಗಿದೆ. ಬಿಡುಗಡೆಯ ಹಿನ್ನೆಲೆಯಲ್ಲಿ ಚಿತ್ರತಂಡ ಇಲ್ಲಿ ಮಾತನಾಡಿದೆ.

“ಮೊದಲ ಸಿನಿಮಾದಲ್ಲೇ ಎರಡೆರಡು ಜವಾಬ್ದಾರಿ …’  ಹೀಗೆ ಹೇಳಿ ನಕ್ಕರು ಸೃಷ್ಟಿ ಪಾಟೀಲ್‌. ಅವರು ಹ್ಯಾಪಿಯಾಗಿ ಹೀಗೆ ಹೇಳಲು ಕಾರಣವಾಗಿದ್ದು, “ಹ್ಯಾಪಿ ನ್ಯೂ ಇಯರ್‌’ ಚಿತ್ರ. ಈ ಚಿತ್ರದ ಮೂಲಕ ಸೃಷ್ಟಿ ಪಾಟೀಲ್‌ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಲಾಂಚ್‌ ಆಗುತ್ತಿದ್ದಾರೆ. ಇದು ಅವರ ಹೋಂಬ್ಯಾನರ್‌ನ ಸಿನಿಮಾ. ಹಾಗಾಗಿ, ನಟನೆ ಜೊತೆಗೆ ನಿರ್ಮಾಣದ ಕಡೆಗೂ ಗಮನ ಕೊಡುವ ಮೂಲಕ ಮೊದಲ ಸಿನಿಮಾದಲ್ಲೇ ಎರಡೆರಡು ಅನುಭವ ಪಡೆದಿದ್ದಾರೆ ಸೃಷ್ಟಿ.

ಅಂದಹಾಗೆ, ಸೃಷ್ಟಿ ಪಾಟೀಲ್‌, ಬಿ.ಸಿ.ಪಾಟೀಲ್‌ ಅವರ ಮಗಳು. ಮಗಳನ್ನು ಚಿತ್ರರಂಗಕ್ಕೆ ಲಾಂಚ್‌ ಮಾಡಬೇಕೆಂಬ ಬಿ.ಸಿ.ಪಾಟೀಲರ ಆಸೆ ಈಗ “ಹ್ಯಾಪಿ ನ್ಯೂ ಇಯರ್‌’ ಮೂಲಕ ಈಡೇರಿದೆ. ಸೃಷ್ಟಿ ಪಾಟೀಲ್‌ಗೆ ಸಿನಿಮಾ ಕ್ಷೇತ್ರವೇನು ಹೊಸತಲ್ಲ. ಬಿ.ಸಿ.ಪಾಟೀಲ್‌ ಸಿನಿಮಾಕ್ಕೆ ಎಂಟ್ರಿಕೊಡುವ ಮೂಲಕ ಸೃಷ್ಟಿಗೆ ಚಿಕ್ಕಂದಿನಿಂದಲೂ ಸಿನಿಮಾ ಬಗ್ಗೆ ನಂಟಿತ್ತು. ಹಾಗಂತ ಯಾವತ್ತೂ ತಾನು ನಟಿಯಾಗಬೇಕು, ಸಿನಿಮಾ ಕ್ಷೇತ್ರದಲ್ಲಿ ಮಿಂಚಬೇಕೆಂದು ಕನಸು ಕಂಡವರಲ್ಲ.

ಹಾಗಾಗಿಯೇ ಎಜುಕೇಶನ್‌ ಕಡೆ ಗಮನಹರಿಸಿದ ಸೃಷ್ಟಿ ಎಂಬಿಎ ಕೂಡಾ ಮುಗಿಸುತ್ತಾರೆ. ಹಿರೇಕೆರೂರುನಲ್ಲಿ ತನ್ನ ತಂದೆ ಮಾಡಿದ ಶಿಕ್ಷಣ ಸಂಸ್ಥೆಗಳನ್ನು ನೋಡಿಕೊಳ್ಳುತ್ತಾ ಆರಾಮವಾಗಿದ್ದ ಸೃಷ್ಟಿಗೆ ಅದೊಂದು ದಿನ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯಾಗುತ್ತದೆ. ಆಸೆ ಅನ್ನೋದಕ್ಕಿಂತ ಅದು ಮನೆಯವರು ಸೇರಿ ಮಾಡಿದ ನಿರ್ಧಾರ. ಅದರ ಪರಿಣಾಮವಾಗಿ ಸೃಷ್ಟಿ ಈಗ ನಾಯಕಿಯಾಗಿ ಎಂಟ್ರಿಕೊಟ್ಟಿದ್ದಾರೆ. “ನನಗೆ ಸಿನಿಮಾ ಮಾಡಬೇಕು, ಆ ಕ್ಷೇತ್ರಕ್ಕೆ ಬೇಗನೇ ಎಂಟ್ರಿಕೊಡಬೇಕೆಂಬ ಆಸೆ ನನಗೆ ಇರಲಿಲ್ಲ.

ಅಪ್ಪ ಮಾಡುವ ಸಿನಿಮಾಗಳನ್ನು ನೋಡಿ ಖುಷಿಪಡುತ್ತಿದ್ದೆ. ಸಿನಿಮಾಕ್ಕೆ ಬರುವ ಮುನ್ನ ಎಜುಕೇಶನ್‌ ಮುಗಿಸಬೇಕೆಂಬ ಆಸೆ ಇತ್ತು. ಅದರಂತೆ ಈಗ ಮುಗಿದಿದೆ’ ಎನ್ನುತ್ತಾರೆ ಸೃಷ್ಟಿ. ಸೃಷ್ಟಿಗೆ ಸಿನಿಮಾದ ಜೊತೆ ತಂದೆಯ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದರಲ್ಲೂ ಆಸಕ್ತಿ ಇದೆ. ಹಾಗಾಗಿ, ಬೆಂಗಳೂರಲ್ಲಿ ಇದ್ದರೂ ಹಿರೇಕೆರೂರಿಗೆ ಹೋಗಿ ಬಂದು ಪಾಟೀಲರ ಜವಾಬ್ದಾರಿಯುತ ಮಗಳಾಗಿದ್ದಾರೆ. “ನನಗೆ ಶಿಕಣ ಸಂಸ್ಥೆಗಳನ್ನು ನಡೆಸುವುದರಲ್ಲೂ ಆಸಕ್ತಿ ಇದೆ. ಅದು ಕೂಡಾ ಒಳ್ಳೆಯ ಕೆಲಸ.

ನಾನು ಆ ಕೆಲಸವನ್ನು ತುಂಬಾ ಶ್ರದ್ಧೆಯಿಂದ ಮಾಡುತ್ತೇನೆ’ ಎನ್ನುವುದು ಸೃಷ್ಟಿ ಮಾತು. ಹೋಂಬ್ಯಾನರ್‌ ಸಿನಿಮಾ, ನನಗೆ ಬೇಕಾದ ಹಾಗೆ ಇರಬಹುದೆಂದು ಸೃಷ್ಟಿ ಪಾಟೀಲ್‌ ಯಾವತ್ತೂ ಯೋಚಿಸಿಲ್ಲ. ಸಿನಿಮಾ ಮಾಡೋದು ನಮ್ಮ ಖುಷಿಗಿಂತ ಹೆಚ್ಚಾಗಿ ಪ್ರೇಕ್ಷಕರನ್ನು ರಂಜಿಸಲು. ಹಾಗಾಗಿ, ಕ್ಯಾಮರಾ ಮುಂದೆ ನಿಲ್ಲುವ ಮುಂಚೆ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡೇ ನಿಲ್ಲಬೇಕೆಂದು ನಿರ್ಧರಿಸಿದ ಸೃಷ್ಟಿ ಆ್ಯಕ್ಟಿಂಗ್‌ ಕ್ಲಾಸಿಗೂ ಸೇರುತ್ತಾರೆ. ಸಿನಿಮಾಕ್ಕೆ ಬೇಕಾದ ಒಂದಷ್ಟು ನಟನಾ ಪಟ್ಟುಗಳನ್ನು ಕಲಿತ ಸೃಷ್ಟಿ ಈಗ “ಹ್ಯಾಪಿ ನ್ಯೂ ಇಯರ್‌’ನಲ್ಲಿ ಟ್ರಾವೆಲರ್‌ ಆಗಿ ಮಿಂಚಿದ್ದಾರೆ.

ಟ್ರಾವೆಲರ್‌ ಪಾತ್ರದಲ್ಲಿ ಸೃಷ್ಟಿ ಮೋಡಿ
“ಹ್ಯಾಪಿ ನ್ಯೂ ಇಯರ್‌’ ಸಿನಿಮಾದಲ್ಲಿ ಸೃಷ್ಟಿ ಟ್ರಾವೆಲರ್‌ ಪಾತ್ರ ಮಾಡಿದ್ದಾರೆ. ಊರುರು ಸುತ್ತುತ್ತಾ ಜನರನ್ನು ಭೇಟಿ ಮಾಡುವ ಪಾತ್ರವದು. “ತುಂಬಾ ಲೈವಿÉಯಾಗಿರುವ ಪಾತ್ರ. ಮೊದಲ ಚಿತ್ರದಲ್ಲೇ ಈ ತರಹದ ಒಂದು ಪಾತ್ರ ಸಿಕ್ಕ ಬಗ್ಗೆ ಖುಷಿ ಇದೆ. ಲೈಫ್ ಅನ್ನು ಬೇರೆ ತರಹ ನೋಡುವ ಪಾತ್ರವದು. ಸ್ವತಂತ್ರಳಾಗಿ ಓಡಾಡಿಕೊಂಡಿರುವ ಪಾತ್ರ. ನನ್ನ ಸ್ಟಫ್ ತೋರಿಸಲು ಇಲ್ಲಿ ಒಳ್ಳೆಯ ಅವಕಾಶ ಸಿಕ್ಕಿದೆ’ ಎಂದು ತನ್ನ ಪಾತ್ರದ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ ಸೃಷ್ಟಿ. ಟ್ರಾವೆಲರ್‌ ಆಗಿ ಊರೂರು ಸುತ್ತುವ ವೇಳೆ ದಿಗಂತ್‌ ಪರಿಚಯವಾಗುತ್ತದೆಯಂತೆ. ಮುಂದೆ ಏನೆಲ್ಲಾ ನಡೆಯುತ್ತದೆ ಎಂಬುದನ್ನು ನೀವು ತೆರೆಮೇಲೆ ನೋಡಬೇಕು.

ಸೃಷ್ಟಿ ನಟಿಸಿದ ಬಹುತೇಕ ಚಿತ್ರೀಕರಣ ಬ್ಯಾಂಕಾಕ್‌ ಹಾಗೂ ಪಟಾಯದಲ್ಲಿ ನಡೆದಿದೆಯಂತೆ. ಮೊದಲೇ ರಿಹರ್ಸಲ್‌ ಮಾಡಿದ್ದರಿಂದ ಚಿತ್ರೀಕರಣದ ವೇಳೆ ಹೆಚ್ಚು ಕಷ್ಟವಾಗಲಿಲ್ಲ ಎಂಬುದು ಸೃಷ್ಟಿ ಮಾತು. ಮಗಳ ಮೊದಲ ಸಿನಿಮಾ ಎಂದಾಗ ಸಹಜವಾಗಿಯೇ ಪಾಲಕರಿಗೆ ಟೆನÒನ್‌ ಇದ್ದೇ ಇರುತ್ತದೆ. ಮಗಳು ಹೇಗೆ ನಟಿಸುತ್ತಾಳ್ಳೋ ಎಂದು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಸೃಷ್ಟಿ ಪಾಟೀಲ್‌ ವಿಷಯದಲ್ಲೂ ಅದು ಮುಂದುವರಿದಿದೆ. ಸಿನಿಮಾದುದ್ದಕ್ಕೂ ಜೊತೆಗಿದ್ದ ಬಿ.ಸಿ.ಪಾಟೀಲ್‌, ಸಾಕಷ್ಟು¿ ಸಲಹೆ- ಸೂಚನೆಗಳ ಮೂಲಕ ಇವರ ನಟನೆಯನ್ನು ತಿದ್ದಿಕೊಳ್ಳಲು ಸಹಾಯ ಮಾಡಿದರಂತೆ.

ಇದು 555 ಸಿನಿಮಾ
ಇದು ಬಿ.ಸಿ.ಪಾಟೀಲ್‌ ತಮ್ಮ ಸಿನಿಮಾ ಬಗ್ಗೆ ಹೇಳುವ ಮಾತು. ಅವರು ಹೀಗೆ ಹೇಳಲು ಕಾರಣ ಚಿತ್ರ ಬಿಡುಗಡೆಯಾಗುತ್ತಿರುವ ದಿನ, ತಿಂಗಳು ಹಾಗೂ ಕಥೆ. ಹೌದು, “ಹ್ಯಾಪಿ ನ್ಯೂ ಇಯರ್‌’ ಚಿತ್ರ ಮೇ 5 ರಂದು ಬಿಡುಗಡೆಯಾಗುತ್ತಿದೆ. ಮೇ ಐದನೇ ತಿಂಗಳು ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಇನ್ನು, ಈ ಚಿತ್ರ ಐದು ಕಥೆಗಳ ಮೂಲಕ ಸಾಗುತ್ತದೆ. ಹಾಗಾಗಿ, ಬಿ.ಸಿ.ಪಾಟೀಲ್‌ “555′ ಸಿನಿಮಾ ಎಂದಿದ್ದು.

“ಚಿತ್ರದಲ್ಲಿ ಬರುವ ಐದು ಪಾತ್ರಗಳು ಎಲ್ಲಾ ವರ್ಗಗಳನ್ನು ಪ್ರತಿನಿಧಿಸುತ್ತವೆ. ಸಿನಿಮಾದ “ಮಾದೇಶ’ ಹಾಡು ಹಿಟ್‌ ಆಗಿದ್ದು, ಸಿನಿಮಾವನ್ನು ಜನ ಅದೇ ರೀತಿ ಸ್ವೀಕರಿಸುವ ವಿಶ್ವಾಸವಿದೆ. ಸುಮಾರು 100 ಸೆಂಟರ್‌ಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತೇವೆ’ ಎಂದು ಸಿನಿಮಾ ಬಗ್ಗೆ ಹೇಳಿದರು ಬಿ.ಸಿ.ಪಾಟೀಲ್‌. ಈ ಸಿನಿಮಾ ಮೂಲಕ ಮಗಳು ಸೃಷ್ಟಿಗೂ ಕನ್ನಡ ಚಿತ್ರರಂಗದಲ್ಲಿ ನೆಲೆಸಿಗುವ ವಿಶ್ವಾಸ ಪಾಟೀಲರಿಗಿದೆ.

ಸ್ಲಮ್‌ ಟು ಸಾಫ್ಟ್ವೇರ್‌
ನಿರ್ದೇಶಕ ಪನ್ನಗಭರಣ ಹೇಳುವಂತೆ ಇದು ಸ್ಲಮ್‌ ಟು ಸಾಫ್ಟ್ವೇರ್‌ವರೆಗಿನ ಕಥೆ ಹೊಂದಿರುವ ಸಿನಿಮಾ. ಐದು ಟ್ರ್ಯಾಕ್‌ಗಳಲ್ಲಿ ಸಾಗುವ ಸಿನಿಮಾ ಎಲ್ಲಾ ವರ್ಗವನ್ನು ಪ್ರತಿನಿಧಿಸುತ್ತವೆ. ಪೊಲೀಸ್‌, ಸ್ಲಮ್‌ ರೌಡಿ, ಆರ್‌ಜೆ, ಸೆಲ್ಸ್‌ ಮ್ಯಾನೇಜರ್‌, ಇಂಡಿಪೆಂಡೆಂಟ್‌ ಹುಡುಗ … ಹೀಗೆ ಎಲ್ಲಾ ರೀತಿಯ ಪಾತ್ರಗಳ ಮೂಲಕ ಸಾಗುವ ಈ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತದೆ ಎಂಬ ವಿಶ್ವಾಸ ಪನ್ನಗ ಅವರಿಗಿದೆ. ಜೊತೆಗೆ ಸಿನಿಮಾವನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸುವ ಕಾರಣಕ್ಕಾಗಿ ವಿಭಿನ್ನ ರೀತಿಯ ಮೂರು ಟ್ರೇಲರ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.

ಚಿತ್ರದಲ್ಲಿ ವಿಜಯ್‌ ರಾಘವೇಂದ್ರ ಪೊಲೀಸ್‌ ಆಗಿ ನಟಿಸಿದ್ದು, ವಿಭಿನ್ನ ಕಥೆಯಲ್ಲಿ ನಟಿಸಿದ ಖುಷಿ ಇದೆಯಂತೆ. ಸೋನು ಚಿತ್ರದಲ್ಲಿ ಮಗುವಿನ ತಾಯಿ ಪಾತ್ರ ಮಾಡಿದ್ದಾರೆ. ದಿಗಂತ್‌ ಉಡಾಫೆ ಹುಡುಗನಾಗಿ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ಯಾರೊಬ್ಬರು ವಿಲನ್‌ ಇಲ್ಲ. ಸನ್ನಿವೇಶಗಳೇ ಅವರನ್ನು ವಿಲನ್‌ ತರಹ ಮಾಡುತ್ತವೆ ಎಂಬುದು ಅವರ ಮಾತು. ಸಂಗೀತ ನಿರ್ದೇಶಕ ರಘು ದೀಕ್ಷಿತ್‌ಗೆ ಹಾಡುಗಳಿಗೆ ಸಂಗೀತ ನೀಡುವುದಕ್ಕಿಂತ ಐದು ವಿಭಿನ್ನ ಕಥೆಗಳಿಗೆ ಹಿನ್ನೆಲೆ ಸಂಗೀತ ನೀಡುವುದು ಕಷ್ಟವಾಯಿತಂತೆ.

No Comments

Leave A Comment