Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಅಗ್ರಿಗೋಲ್ಡ್‌: ಮಂಗಳೂರಿನಲ್ಲಿ ಗ್ರಾಹಕರು, ಏಜೆಂಟರ ಪ್ರತಿಭಟನೆ

ಮಂಗಳೂರು: ರಾಜ್ಯದ 8.5 ಲಕ್ಷ ಅಗ್ರಿಗೋಲ್ಡ್‌ ಗ್ರಾಹಕರಿಗೆ ನ್ಯಾಯ ಒದಗಿಸಿ ಕೊಡಬೇಕು. ಅವರು ಹೂಡಿದ ಮೊತ್ತವನ್ನು ಹಿಂದಿರುಗಿಸಬೇಕು.ಗ್ರಾಹಕರು ಮತ್ತು ಏಜೆಂಟ್‌ಗಳಿಗೆ ಭದ್ರತೆ ಒದಗಿಸಬೇಕು ಎಂದು ಬಿಎಂಎಸ್‌ ಸಂಯೋಜಿತ ಅಗ್ರಿಗೋಲ್ಡ್‌ ಗ್ರಾಹಕರು ಮತ್ತು ಏಜೆಂಟರ ಕ್ಷೇಮಾಭಿವೃದ್ಧಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಅಂಡಾಲ ರಮೇಶ್‌ಬಾಬು ಆಗ್ರಹಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ನಡೆದ ಗಾಹಕರು ಮತ್ತು ಏಜೆಂಟರ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು.

ಈ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದರು. ಮೂರು ವರ್ಷಗಳಿಂದ ಬಾಕಿ ಅಗ್ರಿಗೋಲ್ಡ್‌ ಸಂಸ್ಥೆ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ಛತ್ತೀಸ್‌ಗಢ, ಅಂಡಮಾನ್‌ ನಿಕೋಬಾರ್‌ಗಳಲ್ಲಿ 32 ಲಕ್ಷ ಗ್ರಾಹಕರಿಂದ 8 ಲಕ್ಷ ಏಜೆಂಟರ ಮೂಲಕ 7 ಸಾವಿರ ಕೋಟಿ ರೂ. ಸಂಗ್ರಹಿಸಿದೆ. ಮೆಚೂÂರಿಟಿ ಅವಧಿ ಮುಗಿದರೂ ಕಳೆದ ಮೂರು ವರ್ಷಗಳಿಂದ ಗ್ರಾಹಕರ ಹಣವನ್ನು ಹಿಂದಿರುಗಿಸಿಲ್ಲ ಎಂದು ರಮೇಶ್‌ ಬಾಬು ಹೇಳಿದರು.

ಅಗ್ರಿಗೋಲ್ಡ್‌ ಗ್ರಾಹಕರು ಮತ್ತು ಏಜೆಂಟರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕೆ. ನಾರಾಯಣ ಶೆಟ್ಟಿ, ಪ್ರ. ರಾಜನ್‌,ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಸಿ.ಎನ್‌. ರವಿ, ರವಿಶಂಕರ್‌, ವೆಂಕಟರಮಣಪ್ಪ, ಕುಮಾರ ಸ್ವಾಮಿ, ಚಂದ್ರಶೇಖರ ಸನಿಲ್‌ ಉಪಸ್ಥಿತರಿದ್ದರು.ಈ ವೇಳೆ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

 

No Comments

Leave A Comment