Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ರಾಜ್ಯಗಳ ಒಟ್ಟು ಪ್ರಯತ್ನದಿಂದ ‘ನವ ಭಾರತ’ದ ನಿರ್ಮಾಣ ಸಾಧ್ಯ: ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ: 15 ವರ್ಷಗಳಲ್ಲಿ ರಾಷ್ಟ್ರದ ಆರ್ಥಿಕತೆಯನ್ನು ಹೆಚ್ಚಿಸಲು ವಿಷನ್ ಡಾಕ್ಯುಮೆಂಟ್ ಗಳ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. 30 ರಾಜ್ಯಗಳ ಮುಖ್ಯಮಂತ್ರಿಗಳು  ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು. ಮುಂದಿನ ಏಳು ವರ್ಷಗಳಲ್ಲಿ ಸರ್ಕಾರದ ಕಾರ್ಯತಂತ್ರ ಮತ್ತು ಮೂರು ವರ್ಷಗಳ ಕ್ರಿಯಾ ಯೋಜನೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ನವ ಭಾರತದ ದೂರದೃಷ್ಟಿಯನ್ನು ಎಲ್ಲಾ ರಾಜ್ಯಗಳು ಮತ್ತು ಅಲ್ಲಿನ ಮುಖ್ಯಮಂತ್ರಿಗಳ ಸಂಯೋಜಿತ ಪ್ರಯತ್ನಗಳ ಮೂಲಕ ಸಾಕಾರಗೊಳಿಸಬಹುದು.

ಪ್ರಧಾನಿಯವರ ನೇತೃತ್ವದಲ್ಲಿ ನಡೆದ ನೀತಿ ಆಯೋಗದ ಸಭೆಯ ಮುಖ್ಯಾಂಶಗಳು ಹೀಗಿವೆ:

1. ಮಮತಾ ಬ್ಯಾನರ್ಜಿ ಮತ್ತು ಮುಕುಲ್ ಸಂಗ್ಮಾ ಅವರು ಸಭೆಗೆ ಗೈರು ಹಾಜರಾಗಿದ್ದು ತಮ್ಮ ಬದಲಿಗೆ ಸಚಿವರನ್ನು ಕಳುಹಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಇದುವರೆಗೆ ಸಭೆಗೆ ಬಂದಿರಲಿಲ್ಲ.

2. 15 ವರ್ಷಗಳ ವಿಷನ್ ಡಾಕ್ಯುಮೆಂಟ್ ನ್ನು ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಸಭೆಯಲ್ಲಿ ಮಂಡಿಸುತ್ತಿರುವುದು ಪ್ರಧಾನವಾಗಿದೆ. ಮುಂದಿನ ಏಳು ವರ್ಷಕ್ಕೆ ಸರ್ಕಾರದ ಕಾರ್ಯತಂತ್ರಗಳನ್ನು ರೂಪಿಸುವುದು ಮತ್ತು ಮೂರು ವರ್ಷಗಳ ಕ್ರಿಯಾ ಯೋಜನೆಯಾಗಿದೆ. ದೇಶದ ಆರ್ಥಿಕ, ಸಾಮಾಜಿಕ ವಲಯಗಳ ಅಭಿವೃದ್ಧಿ ಮತ್ತು ಆಂತರಿಕ ಭದ್ರತೆ ಮತ್ತು ರಕ್ಷಣಾ ಕ್ಷೇತ್ರಗಳನ್ನು ಬಲಪಡಿಸುವುದಾಗಿದೆ.

3.ಯೋಜನೆಗಳ ರಚನೆಯಲ್ಲಿ ಮುಖ್ಯಮಂತ್ರಿಗಳ ಪಾತ್ರವನ್ನು ಪ್ರಶಂಸಿಸಿದ ಪ್ರಧಾನಿ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳನ್ನು ಶಿಫಾರಸು ಮಾಡಲು ಮುಖ್ಯಮಂತ್ರಿಗಳಿಗೆ ಹೇಳಿರುವುದು ಇದೇ ಮೊದಲು. ಸ್ವಚ್ಛ ಭಾರತ್, ಕೌಶಲ್ಯಾಭಿವೃದ್ಧಿ ಮತ್ತು ಡಿಜಿಟಲ್ ಪಾವತಿ ಬಗ್ಗೆ ಮುಖ್ಯಮಂತ್ರಿಗಳಿಗೆ ಸಾಕಷ್ಟು ಮಾಹಿತಿ ಒದಗಿಸಲಾಗಿದೆ.

4. ಸರಕು ಮತ್ತು ಸೇವಾ ತೆರಿಗೆ ಮಸೂದೆ ಜಾರಿಯ ಪ್ರಗತಿಯನ್ನು ಮಂಡಳಿಯಲ್ಲಿ ಚರ್ಚಿಸಲಾಯಿತು. ಇಂದು ಜಿಎಸ್ ಟಿ ಮಸೂದೆ ಒಂದು ರಾಷ್ಟ್ರ, ಒಂದು ಮಹತ್ವಾಕಾಂಕ್ಷೆ, ಒಂದು ನಿರ್ಣಯ ಎಂಬ ತತ್ವವನ್ನು ಸಾರುತ್ತದೆ.

No Comments

Leave A Comment