Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಬೆಳಗಾವಿ: ಕೊಳವೆ ಬಾವಿಗೆ ಬಿದ್ದ 6 ವರ್ಷದ ಬಾಲಕಿ


ಬೆಳಗಾವಿ: ಆರು ವರ್ಷದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಕಾಲುಜಾರಿ ನಿರುಪಯುಕ್ತ ಕೊಳವೆ ಬಾವಿಗೆ ಬಿದ್ದ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.ಸ್ಥಳದಲ್ಲಿ ಬಿರುಸಿನ ರಕ್ಷಣಾ ಕಾರ್ಯ ನಡೆಸಲಾಗುತ್ತಿದ್ದು ಎನ್‌ಡಿಆರ್‌ಎಫ್ ನ ನೂರಾರು ಸಿಬಂದಿಗಳು ಬಾಲಕಿಯನ್ನು ಮೇಲಕ್ಕೆ ತರಲು ಹರ ಸಾಹಸ ನಡೆಸುತ್ತಿದ್ದಾರೆ.

ಕ್ಯಾಮರಾ ಬಿಟ್ಟು ಪರಿಶೀಲನೆ ನಡೆಸಿದಾಗ 20 ಅಡಿ ಆಳದಲ್ಲಿ ಬಾಲಕಿಯ ಕೈ ಸ್ಪಷ್ಟವಾಗಿ ಗೋಚರವಾಗಿದೆ. ಹುಕ್‌ ಮೂಲಕ ಮೇಲಕ್ಕೆತ್ತುವ ಪ್ರಯತ್ನ ವಿಫ‌ಲವಾಗಿದ್ದು ರಕ್ಷಣಾ ಕಾರ್ಯ ಮುಂದುವರಿಸಿರುವ ಎನ್‌ಡಿಆರ್‌ಎಫ್ ತಜ್ಞರು ಕೊಳವೆ ಬಾವಿ ಪಕ್ಕದಲ್ಲಿ ಇನ್ನೊಂದು ಗುಂಡಿ ತೆಗೆಯುತ್ತಿದ್ದಾರೆ. ಅಗ್ನಿಶಾಮಕ ದಳ, ಪೊಲೀಸ್‌ ಪಡೆ ಹಾಗೂ ವೈದ್ಯಕೀಯ ತಂಡ ಸ್ಥಳದಲ್ಲೇ ಬೀಡು ಬಿಟ್ಟಿದ್ದು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಸುಮಾರು 400 ಅಡಿ ಕೊರೆದ ಕೊಳವೆ ಬಾವಿಯನ್ನು ಮುಚ್ಚದೆ ಹಾಗೆ ಬಿಡಲಾಗಿತ್ತು. ಹೊಲದಲ್ಲಿ ಆಟವಾಡುತ್ತಿದ್ದ ಬಾಲಕಿ ಸುಮಾರು 30 ಅಡಿ ಆಳಕ್ಕೆ ಬಿದ್ದಿದ್ದು ತನ್ನನ್ನು ಕಾಪಾಡುವಂತೆ ಮೊರೆಯಿಡುತ್ತಿದ್ದಾಳೆ.

ಇದೀಗ ಅಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿದ್ದು, ಬಾಲಕಿಗೆ ಈಗಾಗಲೇ  ಆಕ್ಸಿಜನ್ ಪೂರೈಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ ಕೂಡ ಕಾವೇರಿಯನ್ನು ಕೊಳವೆ ಬಾವಿಯಿಂದ ಮೇಲಕ್ಕೆ ತರುವ ರಕ್ಷಣಾ ಕಾರ್ಯ ಮುಂದುವರಿದಿದ್ದು, ಇದೀಗ ಬಾಲಕಿಯ ಕೈ ಕಾಣಲಾರಂಭಿಸಿದೆ.

ಈಗಾಗಲೇ 130 ಅಡಿ ಆಳದವರೆಗೆ ಗುಂಡಿ ತೆಗೆಯಲಾಗಿದೆ. ಕಾವೇರಿಯ ತಾಯಿ ಸವಿತಾ ತೀವ್ರ ಅಸ್ವಸ್ಥಗೊಂಡಿದ್ದು, ಸ್ಥಳಕ್ಕೆ 108 ಆಂಬ್ಯುಲೆನ್ಸ್ ಆಗಮಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

No Comments

Leave A Comment