Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಮತ್ತೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ, 50 ಯೋಧರ ಸಾವು!

ಕಾಬುಲ್: ಭಯೋತ್ಪಾದನೆ ಪೀಡಿತ ಆಫ್ಘಾನಿಸ್ತಾನದಲ್ಲಿ ಮತ್ತೆ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆದಿದ್ದು, ಶುಕ್ರವಾರ ನಡೆದ ಭೀಕರ ಉಗ್ರ ದಾಳಿಯಲ್ಲಿ ಕನಿಷ್ಠ 50 ಮಂದಿ ಆಫ್ಘಾನಿಸ್ತಾನ ಸೇನೆಯ ಯೋಧರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮಜರ್ ಇ ಷರೀಫ್ ನಗರದ ಉತ್ತರ ಭಾಗದಲ್ಲಿರುವ ಸೇನಾ ಕ್ಯಾಂಪ್ ಮೇಲೆ ಸುಮಾರು 10 ಮಂದಿ ತಾಲಿಬಾನ್ ಉಗ್ರರು ದಾಳಿ ಮಾಡಿದ್ದು, ಮನಸೋ ಇಚ್ಝೆ ಗುಂಡಿನ ಸುರಿಮಳೆ ಗರೆದಿದ್ದಾರೆ. ಆಫ್ಘಾನಿಸ್ತಾನ ಸೇನಾ  ಸಮವಸ್ತ್ರದಂತೆಯೇ ಬಟ್ಟೆತೋಟ್ಟಿದ್ದ ಉಗ್ರರು ಅನುಮಾನ ಬಾರದಂತೆ ಸೇನಾ ಕ್ಯಾಂಪ್ ಪ್ರವೇಶಿಸಿದ್ದರು. ಈ ವೇಳೆ ಗುಂಡಿನ ಮಳೆಗರೆದಿದ್ದಾರೆ. ನೋಡ ನೋಡುತ್ತಿದ್ದಂತೆಯೇ ದಾಳಿಯಲ್ಲಿ ಸುಮಾರು 50 ಮಂದಿ ಯೋಧರು  ಸಾವನ್ನಪ್ಪಿದ್ದರು.ಕ್ಯಾಂಪ್ ನಲ್ಲಿದ್ದ ಇತರೆ ಸೈನಿಕರು ಕೂಡ ಪ್ರತಿದಾಳಿ ಮುಂದಾದರಾದರೂ ಉಗ್ರರನ್ನು ಮಟ್ಟಹಾಕಲು ಸಾಧ್ಯವಾಗಲ್ಲಿಲ್ಲ. ಕ್ಯಾಂಪ್ ಆಯಕಟ್ಟಿನ ಪ್ರದೇಶದಲ್ಲಿ ಅವಿತಿದ್ದ ಉಗ್ರರು ಗುಂಡಿನ ಮಳೆ ಗರೆದರು. ಉಗ್ರರು ಕೂಡ  ಸೇನಾಸಮವಸ್ತ್ರದಲ್ಲೇ ಇದ್ದುದರಿಂದ ಯೋಧರು ಯಾರು? ಉಗ್ರರು ಯಾರು ಎಂಬ ಗೊಂದಲದಿಂದಾಗಿ ಅಪಾರ ಪ್ರಮಾಣದ ಸಾವುನೋವು ಸಂಭವಿಸಿದೆ ಎಂದು ಆಫ್ಘಾನಿಸ್ತಾನ ರಕ್ಷಣಾ ಇಲಾಖೆಯ ವಕ್ತಾರ ದಾವ್ಲತ್ ವಜೀರಿ  ಹೇಳಿದ್ದಾರೆ.

ಆಪ್ಘನ್ ಸೇನೆಗೆ ನ್ಯಾಟೋ ನೆರವು, ಪ್ರತಿದಾಳಿಯಲ್ಲಿ ಐದು ಉಗ್ರರು ಹತ

ಇದೇ ವೇಳೆ ಅತ್ತ ಆಫ್ಘಾನಿಸ್ತಾನದ ಸೇನಾ ಕ್ಯಾಂಪ್ ಮೇಲೆ ಉಗ್ರ ದಾಳಿ ನಡೆಯುತ್ತಿದೆ ಎಂಬ ವಿಚಾರ ತಿಳಿದ ಕೂಡಲೇ ಅಮೆರಿಕದ ನ್ಯಾಟೋ ಪಡೆಗಳು ಸ್ಥಳಕ್ಕೆ ದೌಡಾಯಿಸಿದ್ದು, ಈ ವೇಳೆ ನಡೆದ ಪ್ರತಿದಾಳಿಯಲ್ಲಿ ಐದು ಉಗ್ರರು  ಹತರಾಗಿದ್ದಾರೆ. ಇನ್ನೂ ಐದು ಉಗ್ರರು ಕ್ಯಾಂಪ್ ನಲ್ಲೇ ಅವಿತಿರುವ ಸಾಧ್ಯತೆ ಇದ್ದು, ಉಗ್ರರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಕ್ಯಾಂಪ್ ನಲ್ಲಿ ಹಲವು ಹೆಲಿಕಾಪ್ಟರ್ ಗಳು ಸುತ್ತುವರೆದಿದ್ದು, ಉಗ್ರರು ಯಾವುದೇ ರೀತಿಯಿಂದಲೂ  ತಪ್ಪಿಸಿಕೊಂಡು ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಇನ್ನು ಘಟನೆಯ ಹೊಣೆಯನ್ನು ತಾಲಿಬಾನ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.

No Comments

Leave A Comment