Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಬಲೂಚಿಸ್ತಾನದಲ್ಲಿ ವಿವಿಧ ಸಂಘಟನೆಗಳ 400ಕ್ಕೂ ಹೆಚ್ಚು ಉಗ್ರರು ಶರಣು

ಕ್ವೆಟ್ಟಾ: ಪಾಕಿಸ್ತಾನ ಆಕ್ರಮಿತ ಬಲೂಚಿಸ್ತಾನದಲ್ಲಿ ವಿವಿಧ ಭಯೋತ್ಪಾದನಾ ಸಂಘಟನೆಗಳಿಗೆ ಸೇರಿದೆ 400ಕ್ಕೂ ಹೆಚ್ಚು ಉಗ್ರರು ಶರಣಾಗಿರುವುದಾಗಿ ಶನಿವಾರ ತಿಳಿದುಬಂದಿದೆ.

ಬಲೂಚ್ ರಿಪಬ್ಲಿಕನ್ ಆರ್ಮಿ (ಬಿಆರ್’ಎ), ಬಲೂಚ್ ಲಿಬರೇಷನ್ ಆರ್ಮಿ ಮತ್ತು ಇತರೆ ಪ್ರತ್ಯೇಕತಾವಾದಿಗಳ ಸಂಘಟನೆಗಳಿಗೆ ಸೇರಿದ 434 ಉಗ್ರರು ತಮ್ಮ ಶಸ್ತ್ರಾಸ್ತ್ರಗಳನ್ನು ಅಧಿಕಾರಿಗಳ ವಶಕ್ಕೆ ನೀಡಿ ಶರಣಾಗಿದ್ದಾರೆಂದು ಲೆಫ್ಟಿನೆಂಟ್ ಜನರಲ್ ಅಮಿರ್ ರಿಯಾಜ್ ಅವರು ಹೇಳಿದ್ದಾರೆ.

ಸರ್ಕಾರದ ಬಳಿ ಶರಣಾಗಿ ಸಾಮಾನ್ಯ ಜೀವನ ನಡೆಸಲು ಮನಸ್ಸು ಮಾಡಿರುವವರನ್ನು ಸ್ವಾಗತಿಸುತ್ತೇವೆಂದು ಹೇಳಿದ್ದಾರೆ.

ಬಲೂಚಿಸ್ತಾನ ಮುಖ್ಯಮಂತ್ರಿ ಸನವುಲ್ಲಾ ಜಾಹ್ರಿ ಮಾತನಾಡಿ, ವಿದೇಶಿ ಸಂಸ್ಥೆಗಳು ಬಲೂಚಿಸ್ತಾನದ ಮುಗ್ದ ಜನರನ್ನು ಬಳಸಿಕೊಳ್ಳುತ್ತಿದ್ದು, ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಶರಣಾಗಿರುವ ಉಗ್ರರು ಪಾಕಿಸ್ತಾನ ವಿರೋಧಿಗಳಿಂದ ಮೋಸ ಹೋಗಿದ್ದಾರೆ. ಪ್ರಸ್ತುತ ಶರಣಾಗಿರುವ ಉಗ್ರರು ಸೇರಿ ಈವರೆಗೂ 1,500 ಉಗ್ರರು ಶರಣಾಗಿದ್ದಾರೆಂದು ಕಮಾಂಡರ್ ಶೆರ್ ಮೊಹಮ್ಮದ್ ಅವರು ಹೇಳಿದ್ದಾರೆ.

ಅಫ್ಘಾನಿಸ್ತಾನ, ಬಲೂಚಿಸ್ತಾನದ ಇರಾನ್ ಗಡಿಯಲ್ಲಿ ಉಗ್ರ ಚಟುವಟಿಕೆಗಳು ನಡೆಸುತ್ತಿದ್ದು, ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

No Comments

Leave A Comment