Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಅನಿವಾಸಿ ಬಿಲ್ಲವರ ಸಂಘಟನೆ-ಅಧ್ಯಕ್ಷರಾಗಿ ಅಜಿತ್ ಬಂಗೇರ

ಬಹರೈನ್: ಅನಿ ವಾಸಿ ಬಿಲ್ಲವರ ಸಂಘಟನೆಯಾದ ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್ ನ ಮಹಾಸಭೆ ಕರ್ನಾಟಕ ಸೋಶಿಯಲ್ ಕ್ಲಬ್ ನಲ್ಲಿ ಏಪ್ರಿಲ್ 7, 2017 ರಂದು ಜರಗಿದ್ದು, 2017-2018 ರ ಸಾಲಿನ ಹೊಸ ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ಅಜಿತ್ ಬಂಗೇರ ಅವರನ್ನುಸರ್ವಾನುಮತದಿಂದ ಆರಿಸಲಾಯಿತು.

ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್ ಸಂಘಟನೆಯು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತಿದ್ದು, ಬಹರೈನ್ ದ್ವೀಪ ರಾಷ್ಟ್ರದಲ್ಲಿ ಅನಿವಾಸಿ ಕನ್ನಡಿಗರಿಗಾಗಿ ಪ್ರತಿ ವರ್ಷವೂ ಒಳ್ಳೆಯ ಗುಣಮಟ್ಟದ ಮನೋರಂಜನೆ ಕಾರ್ಯಕ್ರಮಳನ್ನು ಕೊಡುತ್ತಾ ಆಟೋಟ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿರುತ್ತದೆ.

ಮೇ 05, 2003 ರಲ್ಲಿ ಸ್ಥಾಪನೆಯಾದ ಈ ಸಂಘಟನೆಯು ಮೇ 05, 2017 ರಲ್ಲಿ ಹದಿನೈದನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಈ ಸುಸಂದರ್ಭದಲ್ಲಿ ಅದೇ ದಿನ ಮನಾಮದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಈ ವರ್ಷದ ಮೊದಲನೇ ಕಾರ್ಯಕ್ರಮ ಸಂಜೆ 3.30 ರಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗು ಭಜನೆಯನ್ನು ಆಯೋಜಿಸಿದ್ದು, ಈ ಸಂದರ್ಭರ್ದಲ್ಲಿ ನೂತನ ಆಡಳಿತ ಮಂಡಳಿಯಯ ಪದಗ್ರಹಣ ನಡೆಯಲಿದೆ. ಪದಾಧಿಕಾರಿಗಳ ವಿವರ ಇಂತಿದೆ.

ಕುಳಿತವರು: ( ಎಡದಿಂದ ) ಅಶೋಖ್ ಕಟೀಲ್ (ಖಜಾಂಚಿ ), ಹೇಮಂತ್ ಸಾಲಿಯಾನ್ ( ಉಪಾಧ್ಯಕ್ಷ), ಅಜಿತ್ ಬಂಗೇರ ( ಅಧ್ಯಕ್ಷ ), ಹರಿನಾಥ್ ಸುವರ್ಣ ( ಪ್ರಧಾನ ಕಾರ್ಯದರ್ಶಿ ), ನಿತ್ಯಾನಂದ ಸುವರ್ಣ ( ಉಪ ಕಾರ್ಯದರ್ಶಿ )

ನಿಂತವರು: ( ಎಡದಿಂದ ) ಪುರಷೋಥಮ್ ಪೂಜಾರಿ ( ಸದಸ್ಯ ), ಹರೀಶ್ ಕುಮಾರ್ ( ಉಪ ಖಜಾಂಚಿ ) ಹಿತಿನ್ ಪೂಜಾರಿ ( ಉಪ ಮನೋರಂಜನೆ ಕಾರ್ಯದರ್ಶಿ ), ರಾಜ್ ಪೂಜಾರಿ ಬೆದ್ರ (ಸದಸ್ಯ ), ಪ್ರದೀಪ್ ಸುದೇಕರ್ (ಮನೋರಂಜನೆ ಕಾರ್ಯದರ್ಶಿ) ಮತ್ತು ಚಿರಾಗ್ ಸುವರ್ಣ( ಕ್ರೀಡಾ ಕಾರ್ಯದರ್ಶಿ)

No Comments

Leave A Comment