Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಎಟಿಎಸ್ ದಿಟ್ಟ ಕಾರ್ಯಾಚರಣೆ: ಮೂವರು ಶಂಕಿತ ಇಸಿಸ್ ಭಯೋತ್ಪಾದಕರ ಬಂಧನ

ನವದೆಹಲಿ: ಇಸ್ಲಾಮಿಕ್ ಸ್ಟೇಟ್(ಇಸಿಸ್) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಮೂವರು ಶಂಕಿತ ಭಯೋತ್ಪಾದಕರನ್ನು ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ಪಡೆ(ಎಟಿಎಸ್‌) ಅಧಿಕಾರಿಗಳು ಬಂಧಿಸಿದ್ದಾರೆ.

ಉತ್ತರಪ್ರದೇಶ ಎಟಿಎಸ್ ಅಧಿಕಾರಿಗಳು ಶಂಕಿತ ಉಗ್ರರನ್ನು ಜಲಾಂದರ್, ಮುಂಬೈ ಮತ್ತು ಬಿಜ್ನೋರ್ ನಲ್ಲಿ ಬಂಧಿಸಿದ್ದು, ಬಂಧಿತ ಶಂಕಿತ ಉಗ್ರರು ಬಿಹಾರ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಯುವಕರನ್ನು ಇಸಿಸ್ ಉಗ್ರ ಸಂಘಟನೆಗೆ ನೇಮಕಾತಿ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.

ಇದೊಂದು ಜಂಟಿ ಕಾರ್ಯಾಚರಣೆಯಾಗಿದ್ದು ಈ ಕಾರ್ಯಾಚರಣೆಯಲ್ಲಿ ದೆಹಲಿ ವಿಶೇಷ ಪೊಲೀಸ್ ಪಡೆ, ಆಂಧ್ರ ವಿಶೇಷ ಪೊಲೀಸ್ ಪಡೆ, ಮಹಾರಾಷ್ಟ್ರ ಎಟಿಎಸ್, ಪಂಜಾಬ್ ಮತ್ತು ಬಿಹಾರ ಪೊಲೀಸರು ಸೇರಿ ಈ ಮೂವರು ಶಂಕಿತ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಭದ್ರತಾ ಪಡೆ ಯೋಧರು ಆರು ಮಂದಿ ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.

No Comments

Leave A Comment