Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ರಸೀದಿ ಸಹಿತ ಮತಯಂತ್ರ: ಆಯೋಗದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ನವದೆಹಲಿ: ರಸೀದಿ ಸಹಿತ ಮತಯಂತ್ರದ ಬಳಕೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಇತ್ತೀಚೆಗಷ್ಟೇ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಪೈಕಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತಯಂತ್ರಗಳನ್ನು ದುರ್ಬಳಕೆ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಈ ಹಿನ್ನೆಲೆಯಲ್ಲಿ ಮತದಾರರು ಯಾವ ಪಕ್ಷಕ್ಕೆ ಮತ ಹಾಕಿದ್ದಾರೆ ಎಂಬ ಬಗ್ಗೆ ವಿವರಣೆ ಇರುವ ರಸೀದಿ ಸಹಿತ ಮತಯಂತ್ರಗಳ ಬಳಕೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆಯ ಹಿನ್ನೆಲೆಯಲ್ಲಿ ವೆರಿಫೈಡ್‌ ಪೇಪರ್‌ ಆಡಿಟ್‌ ಟ್ರೈಯಲ್‌ (ವಿವಿಪಿಎಟಿ) ಅಳವಡಿಕೆ ಮಾಡಿದ ಮತಯಂತ್ರಗಳನ್ನು ಬಳಕೆ ಮಾಡಲಾಗುತ್ತದೆ. ರಸೀದಿ ನೀಡುವ 16 ಲಕ್ಷ ಮತಯಂತ್ರಗಳ ಖರೀದಿಗೆ ಕೇಂದ್ರ ಚುನಾವಣಾ ಆಯೋಗ 3,174 ಕೋಟಿ ಅನುದಾನ ಕೇಳಿತ್ತು.

ಚುನಾವಣಾ ಆಯೋಗದ ಮನವಿಗೆ ಸ್ಪಂದಿಸಿದ್ದ ಕೇಂದ್ರ ಸರ್ಕಾರ ಈ ವರೆಗೂ 9,200 ಕೋಟಿ ರೂಗಳನ್ನು ನೀಡಿದೆ. ವಿವಿಪಿಎಟಿ ಅಳವಡಿಕೆ ಮಾಡಿದ ನಂತರ ಮತದಾರರು ಯಾವ ಪಕ್ಷಕ್ಕೆ ಮತ ಹಾಕಿದ್ದಾರೆ ಎಂಬ ಬಗ್ಗೆ ವಿವರಣೆ ಇರುವ ರಸೀದಿ ಲಭ್ಯವಿರುತ್ತದೆ. ಅದನ್ನು ಮತದಾರಿಗೆ ಕೊಡಲಾಗುವುದಿಲ್ಲ. ಆದರೆ ತಾವು ಯಾರಿಗೆ ಮತಚಲಾವಣೆ ಮಾಡಿದ್ದೇವೆ ಎಂಬ ಬಗ್ಗೆ ಮತದಾರರು ರಸೀದಿಯನ್ನು ವೀಕ್ಷಿಸಬಹುದಾಗಿದೆ.

No Comments

Leave A Comment