Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದ 118ನೇ ಭಜನಾ ಸಪ್ತಾಹದ ಆಮoತ್ರಣ ಪತ್ರಿಕೆ ಬಿಡುಗಡೆ-ಅಗಸ್ಟ್ 16ರಿ೦ದ ಭಜನಾ ಸಪ್ತಾಹ ಆರoಭ

ಶಿಮ್ಲಾ: ಟಾನ್ಸ್ ನದಿಗೆ ಉರುಳಿ ಬಿದ್ದ ಬಸ್; 44 ಸಾವು, ಹಲವರಿಗೆ ಗಾಯ

ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಬಸ್ ವೊಂದು ಟನ್ಸ್ ನದಿಗೆ ಉರುಳಿಬಿದ್ದ ಪರಿಣಾಮ 44 ಮಂದಿ ಸಾವನ್ನಪ್ಪಿ ಹಲವರಿಗೆ ಗಾಯವಾಗಿರುವ ಘಟನೆ ಬುಧವಾರ ನಡೆದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳತ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಸ್ ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅಪಘಾತಕ್ಕೀಡಾದ ಬಸ್ ಉತ್ತರಾಖಂಡದ ತಿಯೂನಿಯಿಂದ ವಿಕಾಸ್ ನಗರಕ್ಕೆ ತೆರಳುತ್ತಿತ್ತು. ಇಂದು ಬೆಳಿಗ್ಗೆ ಶಿಮ್ಲಾದ ನೆರ್ವಾ ಕುಗ್ರಾಮ ಬಳಿ ತೆರಳುತ್ತಿದ್ದಂತೆ ಟಾನ್ಸ್ ನದಿಗೆ ಉರುಳಿಬಿದ್ದಿದೆ.

ಬಸ್ ಉರುಳಿ ಬಿದ್ದಿರುವ ಸ್ಥಳ ಪ್ರಪಾತವಾಗಿದ್ದು, ಸ್ಥಳಕ್ಕೆ ರಕ್ಷಣಾ ತಂಡ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಪ್ರತ್ಯುಷ್ ಸಿಂಗ್ ಅವರು ಹೇಳಿದ್ದಾರೆ.

ಪರಿಹಾರ ಘೋಷಿಸಿದ ಉತ್ತರಾಖಂಡ್ ಸರ್ಕಾರ

ದುರ್ಘಟನೆಯಲ್ಲಿ ಸಾವನ್ನಪ್ಪಿದವರಿಗೆ ತೀವ್ರ ಸಂತಾಪ ಸೂಚಿಸಿರುವ ಉತ್ತರಾಖಂಡ ರಾಜ್ಯ ಸರ್ಕಾರ ಸಾವನ್ನಪ್ಪಿದವರಿಗೆ ತಲಾ ರೂ.1 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ರೂ.50 ಸಾವಿರ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ ರೂ.25 ಸಾವಿರ ಪರಿಹಾರವನ್ನು ಘೋಷಣೆ ಮಾಡಿದೆ.

No Comments

Leave A Comment