Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

‘ಬಾಂಬ್’ಗಳ ಮಹಾತಾಯಿ’ ದಾಳಿಗೆ 13 ಮಂದಿ ಭಾರತೀಯರೂ ಬಲಿ?

ಕಾಬೂಲ್: ಇತ್ತೀಚೆಗಷ್ಟೇ ಅಫ್ಘಾನಿಸ್ದಾನದ ಮೇಲೆ ಅಮೆರಿಕ ನಡೆಸಿದ್ದ ಅತೀ ದೊಡ್ಡ ಪರಮಾಣೇತರ ಬಾಂಬ್ (ಬಾಂಬ್’ಗಳ ಮಹಾತಾಯಿ) ದಾಳಿಯಲ್ಲಿ ಮೃತಪಟ್ಟ 96 ಜನರಲ್ಲಿ 13 ಮಂದಿ ಭಾರತೀಯರೂ ಕೂಡ ಇದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಅಫ್ಘಾನಿಸ್ತಾನದ ಮೇಲಿನ ದಾಳಇಯಲ್ಲಿ ಭಾರತೀಯರೂ ಕೂಡ ಮೃತಪಟ್ಟಿದ್ದಾರೆಂದು ಗುಪ್ತಚರ ಇಲಾಖೆ ದೃಢಪಡಿಸಿದೆ ಎಂದು ಟೊಲೊ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಟೊಲೊ ಅಫ್ಘಾನಿಸ್ತಾದ ಸುದ್ದಿ ಮಾಧ್ಯಮವಾಗಿದ್ದು, ಅಮೆರಿಕ ನಡೆಸಿದ ಬಾಂಬ್ ದಾಳಿಯಲ್ಲಿ 12 ಪಾಕಿಸ್ತಾನ ಪ್ರಜೆಗಳು, 12 ತಜಿಕಿಸ್ತಾನಿಗಳು ಹಾಗೂ 13 ಮಂದಿ ಭಾರತೀಯರೂ ಇದ್ದರು ಎಂದು ವರದಿಯಲ್ಲಿ ಹೇಳಿಕೊಂಡಿದೆ.

ನಂಗರ್ ಹಾರ್ ಪ್ರಾಂತ್ಯದ ಅಚಿನ್ ಜಿಲ್ಲೆಯ ಸುರಂಗಗಳು ಹಾಗೂ ಗುಹೆಗಳ ಮೇಲೆ ನಡೆದ ದಾಳಿಯಲ್ಲಿ 13 ಭಾರತೀಯರು ಇದ್ದರು. ಮೃತಪಟ್ಟ 13 ಭಾರತೀಯರು (ಡೀಶ್) ಇಸಿಸ್ ಉಗ್ರ ಸಂಘಟನೆಗೆ ಸೇರಿದ ಉಗ್ರರಾಗಿದ್ದಾರೆ. ಈ ಪೈಕಿ ಇಬ್ಬರು ಇಸಿಸ್ ಕಮಾಂಡರ್ ಗಳಿದ್ದು, ಮೊಹಮ್ಮದ್ ಹಾಗೂ ಅಲ್ಲಾ ಗುಪ್ತಾ ಎಂದು ಗುರ್ತಿಸಲಾಗಿದೆ ಎಂದು ವರದಿ ಹೇಳಿದೆ.

ನಂಗರ್ ಹಾರ್ ನಲ್ಲಿ ನಡೆದ ಅಮೆರಿಕ ವಾಯುದಾಳಇಯಲ್ಲಿ ಇತ್ತೀಚೆಗೆ ಇಬ್ಬರು ಕೇರಳ ಮೂಲದ ಇಸಿಸ್ ಉಗ್ರರು ಹತ್ಯೆಯಾಗಿದ್ದಾರೆಂದು ವರದಿಯಾಗಿತ್ತು. ಈಗ ಮೃತಪಟ್ಟಿದ್ದಾರೆನ್ನಲಾಗುತ್ತಿರುವ 13 ಮಂದಿ ಉಗ್ರರಲ್ಲಿ ಇಬ್ಬರನ್ನು ಹೊರತು ಪಡಿಸಿದರೆ, ಉಳಿದವರ ಊರುಗಳಾಗಲಿ ಅಥವಾ ಹೆಸರುಗಳಾಗಲಿ ಸರಿಯಾಗಿ ಲಭ್ಯವಾಗಿಲ್ಲ. ಕಳೆದ ವರ್ಷ 21 ಕೇರಳ ಮೂಲದ ಯುವಕರು ದೇಶ ಬಿಟ್ಟು ಓಡಿ ಹೋಗಿ ಇಸಿಸ್ ಉಗ್ರ ಸಂಘಟನೆಯನ್ನು ಸೇರ್ಪಡೆಗೊಂಡಿದ್ದು ಇಲ್ಲಿ ಗಮನಾರ್ಹ.

No Comments

Leave A Comment