Log In
BREAKING NEWS >
ದೀಪ ಪ್ರಜ್ವಲಿಸುವುದರೊ೦ದಿಗೆ ಕಲ್ಯಾಣಪುರ ಭಜನಾ ಸಪ್ತಾಹ ಮಹೋತ್ಸವಕ್ಕೆ ಅಮ್ಮು೦ಜೆ ಗುರುಪ್ರಸಾದ್ ನಾಯಕ್ ರವರಿ೦ದ ಅದ್ದೂರಿಯ ಚಾಲನೆ........ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಬೆಳಗಾವಿಯಲ್ಲಿ ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಯತ್ನ, ಬ್ಲ್ಯಾಕ್’ಮೇಲ್ ಆರೋಪ

ಬೆಳಗಾವಿ(ಏ. 18): ಬಿಜೆಪಿಯ ಘಟಾನುಘಟಿ ನಾಯಕರ ಹೆಸರು ಹೇಳಿಕೊಂಡ ಬಿಜೆಪಿ ಮುಖಂಡನ ಪುತ್ರನೋರ್ವ ಯುವತಿಯ ಬಾಳಲ್ಲಿ ಆಟವಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕೋಡಿ ಪಟ್ಟಣದ ಬಿಜೆಪಿ ಪುರಸಭೆ ಸದಸ್ಯ  ಸುರೇಶ್​​ ಕಟ್ಟಿಕರನ ಪುತ್ರ ಸಂಜೀವ್​ ಎಂಬಾತನಿಂದ ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದ ಯುವತಿಗೆ ಲೈಂಗಿಕ ಕಿರುಕುಳ ಹಾಗೂ ಬ್ಲಾಕ್​ ಮೇಲ್​ ಮಾಡಿದ ಆರೋಪ ಕೇಳಿಬಂದಿದೆ.

ಆರೋಪಿ ಸಂಜೀವ್, ಯುವತಿ ಮೇಲೆ ತಾನು ಅತ್ಯಾಚಾರಕ್ಕೆ ಯತ್ನಿಸಿದ ದೃಶ್ಯದ ವಿಡಿಯೊ ಸೆರೆ ಹಿಡಿದು,​ ಹಣಕ್ಕಾಗಿ ಸತತವಾಗಿ ಬ್ಲ್ಯಾಕ್’ಮೇಲ್ ಮಾಡಿ 2.50 ಲಕ್ಷ ಹಣ ಕಿತ್ತಿದ್ದಾನೆ. ಈಗ ಮತ್ತೆ 50 ಸಾವಿರ ರೂಪಾಯಿ ಹಣ ಕೊಡಬೇಕೆಂದು ದುಂಬಾಲು ಬಿದ್ದ ಆತ, ಹಣ ನೀಡದಿದ್ದರೆ ವಿಡಿಯೋವನ್ನು ಯೂಟ್ಯೂಬ್ ಮೊದಲಾದೆಡೆ ಅಪ್’ಲೋಡ್ ಮಾಡಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿರುತ್ತಾನೆ. ಕೊನೆಗೆ ಈ ದಲಿತ ಯುವತಿ ಬೇರೆ ಮಾರ್ಗ ಕಾಣದೆ ಮಹಿಳಾ ಹೋರಾಟಗಾರ್ತಿ ಪ್ರಮೋದಾ ಹಜಾರೆ ಅವರ ನೆರವಿನಿಂದ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸುತ್ತಾಳೆ. ಆದರೆ, ಆರೋಪಿಯು ಪ್ರಭಾವಿ ವ್ಯಕ್ತಿಯ ಪುತ್ರನಾದ್ದರಿಂದ ಪೊಲೀಸರಿಂದ ಯುವತಿಗೆ ಇನ್ನೂ ನೆರವು ಸಿಕ್ಕಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ನಡೆದದ್ದೇನು?
ಯುವತಿಗೆ ನೆರವು ನೀಡುತ್ತಿರುವ ಹೋರಾಟಗಾರ್ತಿ ಪ್ರಮೋದಾ ಹಜಾರೆಯವರು ಸುವರ್ಣನ್ಯೂಸ್ ಜೊತೆ ಮಾತನಾಡಿ ಒಂದಷ್ಟು ವಿವರ ನೀಡಿದ್ದಾರೆ. ಆರೋಪಿ ಸಂಜೀವ್’ಗೂ ಯುವತಿಗೂ ಯಾವುದೇ ಸಂಪರ್ಕವಿರಲಿಲ್ಲ. ಸಂಜೀವನೇ ಮೊದಲು ಯುವತಿಗೆ ಪದೇಪದೇ ಕರೆ ಮಾಡುತ್ತಿರುತ್ತಾನೆ. ಗೊತ್ತಿಲ್ಲದ ನಂಬರ್ ಆದ್ದರಿಂದ ಯುವತಿ ಕಾಲ್ ರಿಸೀವ್ ಮಾಡೋದಿಲ್ಲ. ಸಾಕಷ್ಟು ಬಾರಿ ಕರೆ ಮಾಡಿದ ಬಳಿಕ ಒಮ್ಮೆ ರಿಸೀವ್ ಮಾಡುತ್ತಾಳೆ. ಅದಾದ ಬಳಿಕ ಒಂದೆರಡು ಬಾರಿ ಅವರಿಬ್ಬರ ನಡುವೆ ಮೊಬೈಲ್’ನಲ್ಲಿ ಮಾತುಗಳಾಗಿವೆ.

ಒಂದು ದಿನ ಯುವತಿ ರಸ್ತೆಯಲ್ಲಿ ನಡೆದುಹೋಗಬೇಕಾದರೆ ಬೈಕ್’ನಲ್ಲಿ ಬಂದ ಆರೋಪಿ ಸಂಜೀವ್ ಆಕೆಯ ಮೊಬೈಲ್ ಕಿತ್ತುಕೊಂಡು ಹೋಗುತ್ತಾನೆ. ಮೊಬೈಲ್ ಮರಳಿ ಪಡೆಯಲು ಯುವತಿಯು ಆತನನ್ನು ಫಾಲೋ ಮಾಡುತ್ತಾಳೆ. ಮೊಬೈಲ್ ಬೇಕೆಂದರೆ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದಕ್ಕೆ ಬರಬೇಕೆಂದು ಯುವತಿಗೆ ತಿಳಿಸುತ್ತಾನೆ. ಮೊಬೈಲ್’ಗೋಸ್ಕರ ಯುವತಿ ಅಲ್ಲಿಗೆ ಹೋಗುತ್ತಾಳೆ. ಆದರೆ, ಪ್ರಮೋದಾ ಹಜಾರೆ ಪ್ರಕಾರ ಆರೋಪಿ ಮಾಡಿದ ಪ್ರೀಪ್ಲಾನ್ ಅದಾಗಿತ್ತು. ಕಟ್ಟಡದಲ್ಲಿ ಆತ ರಹಸ್ಯವಾಗಿ ಕೆಮರಾ ಫಿಕ್ಸ್ ಮಾಡಿರುತ್ತಾನೆ. ಯುವತಿ ಬಂದೊಡನೆಯೇ ಆಕೆಯನ್ನು ರೇಪ್ ಮಾಡಲು ಯತ್ನಿಸುವುದನ್ನು ಕೆಮರಾದಲ್ಲಿ ರೆಕಾರ್ಡ್ ಮಾಡುತ್ತಾನೆ.

ನಂತರ, ಆ ವಿಡಿಯೋವನ್ನಿಟ್ಟುಕೊಂಡು ಸಂಜೀವನು ಯುವತಿಗೆ ಬ್ಲ್ಯಾಕ್’ಮೇಲ್ ಮಾಡುತ್ತಾ ಆಗಾಗ ಹಣ ವಸೂಲಿ ಮಾಡುತ್ತಿರುತ್ತಾನೆ. ಇದು ಒಂದೂವರೆ ವರ್ಷದಿಂದ ನಡೆದಿದೆ ಎಂದು ಸುವರ್ಣನ್ಯೂಸ್’ಗೆ ಪ್ರಮೋದಾ ಹಜಾರೆ ತಿಳಿಸಿದ್ದಾರೆ.

ಸಂಜೀವ್ ಆರೆಸ್ಸೆಸ್ ಸ್ವಯಂಸೇವಕ?
ಪ್ರಮೋದಾ ಹೇಳುವ ಪ್ರಕಾರ ಆರೋಪಿ ಸಂಜೀವ್ ಆರೆಸ್ಸೆಸ್ ಕಾರ್ಯಕರ್ತನಾಗಿದ್ದಾನೆ. ಆತನ ತಂದೆ ಸುರೇಶ್ ಕಟ್ಟಿಕರನ ಅವರು ಚಿಕ್ಕೋಡಿಯ ಬಿಜೆಪಿ ಕಾರ್ಪೊರೇಟರ್ ಆಗಿದ್ದಾರೆ. ಆತನ ಕುಟುಂಬವು ಈಶ್ವರಪ್ಪ ಸೇರಿದಂತೆ ಬಿಜೆಪಿಯ ಪ್ರಭಾವಿ ನಾಯಕರ ಆಪ್ತವೆನಿಸಿದೆಯಂತೆ.

ಕೆಲ ದಿನಗಳ ಹಿಂದೆ ಆರೋಪಿ ಸಂಜೀವ್​ ಇದೇ ರೀತಿ ಬೇರೊಬ್ಬಳು ಯುವತಿಗೆ ಮದುವೆ ಆಗೋದಾಗಿ ವಂಚಿಸಿ ಜೈಲಿಗೆ ಹೋಗಿ ಬಂದಿದ್ದನೆಂಬ ಆರೋಪವೂ ಕೇಳಿಬರುತ್ತಿದೆ.

No Comments

Leave A Comment