Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

1300 ಜನರಿಗೆ ಗಾಯ ಮ್ಯಾನ್ಮಾರ್‌: ಪ್ರಸಿದ್ಧ ನೀರು ಹಬ್ಬಕ್ಕೆ 285 ಜನ ಬಲಿ

ನೈಪೆ ತಾವ್‌: ಮ್ಯಾನ್ಮಾರ್‌ ದೇಶದಲ್ಲಿ ನಡೆದ ನೀರಿನ ಹಬ್ಬದ ವೇಳೆ 285 ಜನ ಮೃತಪಟ್ಟಿದ್ದು 1300ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಮ್ಯಾನ್ಮಾರ್‌ ದೇಶದಲ್ಲಿ  ಈ ನೀರಿನ ಹಬ್ಬ ನಾಲ್ಕು ದಿನ ನಡೆಯುತ್ತದೆ. ದೇಶಾದ್ಯಂತ ಜರುಗುವ ಈ ನೀರಿನ ಹಬ್ಬಕ್ಕೆ  ಈ ಸಲ 285 ಜನ ಬಲಿಯಾಗಿದ್ದಾರೆ. ಯಾಂಗೂನ್ ಮತ್ತು ನೈಪೆ ತಾವ್‌ ಮಹಾನಗರಗಳಲ್ಲೂ 89 ಜನ ಸಾವನ್ನಪ್ಪಿದ್ದಾರೆ.

ಹಬ್ಬದ ಸಂಭ್ರಮಾಚರಣೆ ಸಂದರ್ಭದಲ್ಲಿ ಗಲಾಟೆ ಮಾಡಿದ್ದ 1200 ಜನರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಈ ನೀರಿನ ಹಬ್ಬವನ್ನು ಮ್ಯಾನ್ಮಾರ್‌ ನಲ್ಲಿ ಹೊಸ ವರ್ಷದ ಹಬ್ಬ ಎಂದು ಸಹ ಕರೆಯುತ್ತಾರೆ.

No Comments

Leave A Comment