Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ನಟ ಸಂಜಯ್ ದತ್ ವಿರುದ್ಧದ ಜಾಮೀನು ರಹಿತ ವಾರಂಟ್ ವಜಾ

ಮುಂಬೈ: ಚಿತ್ರ ನಿರ್ಮಾಪಕ ಶಕೀಲ್ ನೂರಾನಿಗೆ ಬೆದರಿಕೆ ಹಾಕಿದ್ದಕ್ಕಾಗಿ ಮುಂಬೈಯ ಅಂಧೇರಿ ನ್ಯಾಯಾಲಯ ಬಾಲಿವುಡ್ ನಟ ಸಂಜಯ್ ದತ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ್ದು ಇದೀಗ ವಾರೆಂಟ್ ಅನ್ನು ವಜಾಗೊಳಿಸಿದೆ.

ನಟ ಸಂಜಯ್ ದತ್ ಇಂದು ಕೋರ್ಟ್ ಮುಂದೆ ಹಾಜರಾಗಿದ್ದರಿಂದ ಕೋರ್ಟ್ ಅವರ ವಿರುದ್ಧ ಜಾರಿಯಾಗಿದ್ದ ಜಾಮೀನು ರಹಿತ ಬಂಧನ ವಾರೆಂಟ್ ಅನ್ನು ವಜಾಗೊಳಿಸಿದೆ.

ಇದು 2009ರಲ್ಲಿ ನಡೆದ ಘಟನೆಗೆ ಸಂಬಂಧಿಸಿದ ಪ್ರಕರಣವಾಗಿದ್ದು, ನಟ ಸಂಜಯ್ ದತ್ ನೂರಾನಿಯವರ ಚಿತ್ರ ಜಾನ್ ಕಿ ಬಾಜಿಯಲ್ಲಿ ಮುಖ್ಯ ಪಾತ್ರ ವಹಿಸಬೇಕಾಗಿತ್ತು. ಪಾತ್ರ ಮಾಡುವುದಾಗಿ ಹೇಳಿದ ಸಂಜಯ್ ದತ್ ನಂತರ ಶೂಟಿಂಗ್ ಗೆ ಹೋಗಲಿಲ್ಲ ಮತ್ತು ಚಿತ್ರಕ್ಕೆ ಸಂಭಾವನೆಯಾಗಿ ತೆಗೆದುಕೊಂಡಿದ್ದ 50 ಲಕ್ಷ ರೂಪಾಯಿಗಳನ್ನು ಕೂಡ ನೀಡಲಿಲ್ಲ. ಸಮಸ್ಯೆ ಬಗೆಹರಿಯದಿದ್ದಾಗ ನೂರಾನಿ ನ್ಯಾಯಾಲಯದ ಮೊರೆ ಹೋದರು. ಮುಂಬೈ ಹೈಕೋರ್ಟ್ ದತ್ ಅವರ ಆಸ್ತಿಯನ್ನು ವಶಪಡಿಸಿಕೊಳ್ಳುವಂತೆ ಆದೇಶ ನೀಡಿತು. ಆ ಸಂದರ್ಭದಲ್ಲಿ ತಮಗೆ ಭೂಗತಲೋಕದಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ನೂರಾನಿ ಅಂಧೇರಿ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದರು.

ಈ ಹಿಂದಿನ ಚೆಕ್‌–ಬೌನ್ಸ್‌ ಪ್ರಕರಣದ ಸಂಬಂಧವೂ ಸಂಜಯ್‌ ದತ್‌ ಮುಂಬೈ ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಿರಲಿಲ್ಲ. ನಿರ್ಮಾಪಕ ಶಕೀಲ್‌ ನೂರಾನಿ ಅವರ ಸಿನಿಮಾ ಪೂರೈಸದ ಕಾರಣ ಸಂಜಯ್‌ ದತ್‌ 1 ಕೋಟಿ ನೀಡಬೇಕಿದೆ.

No Comments

Leave A Comment