Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ದಿನಕರನ್’ಗೆ ಮತ್ತಷ್ಟು ಸಂಕಷ್ಟ: ಮಧ್ಯವರ್ತಿಯಿಂದ ರೂ.1.3 ಕೋಟಿ ವಶಕ್ಕೆ ಪಡೆದ ಪೊಲೀಸರು

ನವದೆಹಲಿ: ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಟಿಟಿವಿ ದಿನಕರನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಪ್ರಕರಣ ಸಂಬಂಧ ಮಧ್ಯವರ್ತಿಯೊಬ್ಬರಿಂದ ರೂ.1.3 ಕೋಟಿ ಹಣವನ್ನು ದೆಹಲಿ ಪೊಲೀಸರು ಸೋಮವಾರ ವಶಕ್ಕೆ ಪಡೆದುಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

ಮಧ್ಯವರ್ತಿ ಸುಖೇಶ್ ಚಂದ್ರಶೇಖರ್ ಎಂಬಾತನಿಂದ ರೂ.1.3 ಕೋಟಿ ಹಣವನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.

ತಮ್ಮ ಬಣಕ್ಕೆ ಎಐಎಡಿಎಂಕೆ ಪಕ್ಷ ಚಿನ್ಹೆ ಎರಡು ಎಲೆಗಳ ಗುರುತನ್ನು ನೀಡಬೇಕು ಎಂದು ಹೇಳಿ ಟಿಟಿವಿ ದಿನಕರನ್ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಮೇರೆಗೆ ಈ ಹಿಂದೆ ಎಫ್ಐಆರ್ ದಾಖಲಾಗಿತ್ತು.

ನಿನ್ನೆಯಷ್ಟೇ ಚೆನ್ನೈನ ವಿವಿಧೆಡೆ ದಾಳಿ  ಮಾಡಿದ್ದ ಅಧಿಕಾರಿಗಳು ಅಪಾರ ಪ್ರಮಾಣದ ಹಣವನ್ನು ಜಪ್ತಿ ಮಾಡಿದ್ದರು. ಈ ವೇಳೆ ಚುನಾವಣಾ ಆಯೋಗದ ಮಧ್ಯವರ್ತಿ ಎಂದು ಹೇಳಲಾಗುತ್ತಿರುವ ಸುಖೇಶ್ ಚಂದ್ರಶೇಖರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಶಶಿಕಲಾ ಬಣದಿಂದ ಲಂಚ ಪಡೆದಿದ್ದು ನಿಜ ಎಂದು ಸುಖೇಶ್ ಚಂದ್ರಶೇಖರ್ ಒಪ್ಪಿಕೊಂಡಿದ್ದ.

ಸುಖೇಶ್ ನೀಡಿದ ಮಾಹಿತಿ ಆಧಾರದ ಮೇರೆಗೆ ದೆಹಲಿ ಪೊಲೀಸರು ಇಂದೂ ಕೂಡ ಕಾರ್ಯಾಚರಣೆ ನಡೆಸಿದ್ದು, 1.3 ಕೋಟಿಯಷ್ಟು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಂತೆ ತಮ್ಮ ವಿರುದ್ಧ ಕೇಳಿಬಂದ ಆರೋಪಗಳನ್ನು ನಿರಾಕರಿಸುತ್ತಿರುವ ಟಿಟಿವಿ ದಿನಕರನ್ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾದಂತಾಗಿದೆ.

No Comments

Leave A Comment