Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಕಿಡಂಬಿ ಶ್ರೀಕಾಂತ್ ಮಣಿಸಿದ ಸಾಯಿ ಪ್ರಣೀತ್ ಸಿಂಗಾಪುರ ಓಪನ್ ಚಾಂಪಿಯನ್

ಸಿಂಗಾಪುರ: ಸಿಂಗಾಪುರ ಓಪನ್ ಸೂಪರ್ ಸಿರೀಸ್ ನ ಫೈನಲ್ ಪಂದ್ಯದಲ್ಲಿ ಭಾರತೀಯ ಆಟಗಾರರು ಸೆಣಸಿದ್ದು ಕಿಡಂಬಿ ಶ್ರೀಕಾಂತ್ ರನ್ನು ಮಣಿಸಿ ಸಾಯಿ ಪ್ರಣೀತ್ ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ಸಿಂಗಾಪುರ ಓಪನ್ ಸೂಪರ್ ಸಿರೀಸ್ ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಮತ್ತು ಸಾಯಿ ಪ್ರಣೀತ್ ಅವರು ಫೈನಲ್ ಪ್ರವೇಶಿಸಿದ್ದರು. ಇಂದು ನಡೆದ ಫೈನಲ್ ಪಂದ್ಯದಲ್ಲಿ ಪ್ರಣೀತ್ 21-17, 17-21, 21-12 ಅಂತರದಿಂದ ಕಿಡಂಬಿ ಶ್ರೀಕಾಂತ್ ರನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ಸಿಂಗಾಪುರ ಸೂಪರ್ ಸಿರೀಸ್ ಚಾಂಪಿಯನ್ ಪಟ್ಟ ಅಲಂಕಿಸಿದ ಭಾರತದ ಎರಡನೇ ಆಟಗಾರ ಎಂಬ ಖ್ಯಾತಿಗೆ ಸಾಯಿ ಪ್ರಣೀತ್ ಭಾಜನರಾಗಿದ್ದಾರೆ.

No Comments

Leave A Comment