ರಶಿದಿನ್(ಸಿರಿಯಾ): ಸಿರಿಯಾ ನಿರಾಶ್ರಿತರಿದ್ದ 2 ಬಸ್ ಗಳನ್ನು ಗುರಿಯಾಗಿರಿಸಿಕೊಂಡು ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ 100 ಮಂದಿ ಅಸುನೀಗಿದ್ದಾರೆ.
ಸಿರಿಯಾ ಸರ್ಕಾರಿ ಪಡೆಗಳ ನಿಯಂತ್ರಣದಲ್ಲಿರುವ ಅಲೆಪ್ಪೋದ ಉಪನಗರ ರಶಿದಿನ್ ನಲ್ಲಿ ಈ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆದಿದ್ದು ಅಧಿಕೃತ ಸಾವಿನ ಸಂಖ್ಯೆ 43 ಎಂದು ಹೇಳಲಾಗಿದ್ದರೂ ನಾಗರಿಕರ ರಕ್ಷಣಾ ಗುಂಪು ವೈಟ್ ಹೆಲ್ಮೆಟ್ ಎಂಬ ಸಂಘಟನೆ ನೀಡಿದ ಮಾಹಿತಿ ಪ್ರಕಾರ ಕನಿಷ್ಠ 100 ಮಂದಿ ಅಸುನೀಗಿದ್ದಾರೆ. ಇನ್ನು ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನು ರಕ್ಕಾದಲ್ಲಿ ಅಮೆರಿಕ ಮೈತ್ರಿ ಪಟೆಗಳು ಇಸ್ಲಾಮಿಕ್ ಸ್ಟೇಟ್ ವಿರುದ್ಧ ಮುನ್ನುಗ್ಗಿ ತೆರಳುತ್ತಿರುವಂತೆಯೇ ಈ ಘಟನೆ ನಡೆದಿದೆ.