Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಉದ್ಯಮಿಗೆ ಬ್ಲ್ಯಾಕ್ ಮೇಲ್: ಜನಶ್ರೀ ವಾಹಿನಿ ಸಿಇಒ ಲಕ್ಷ್ಮೀ ಪ್ರಸಾದ್ ವಾಜಪೇಯಿ ಬಂಧನ

ಬೆಂಗಳೂರು: ಉದ್ಯಮಿಯೊಬ್ಬರಿಗೆ ಬ್ಲ್ಯಾಕ್ ಮೇಲೆ ಮಾಡಿ ದುಡ್ಡಿಗೆ ಬೇಡಿಕೆ ಇಟ್ಟಿದ್ದ ಆರೋಪ ಮೇಲೆ ಖಾಸಗಿ ಸುದ್ದಿ ವಾಹಿನಿ ಜನಶ್ರೀ ಸಿಇಒ ಲಕ್ಷ್ಮೀ ಪ್ರಸಾದ್ ವಾಜಪೇಯಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಲಕ್ಷ್ಮೀ ಪ್ರಸಾದ್ ವಾಜಪೇಯಿ ಅವರು ಉದ್ಯಮಿಯೊಬ್ಬರಿಗೆ ಹತ್ತು ಕೋಟಿ ರುಪಾಯಿಗೆ ಬೇಡಿಕೆ ಇಟ್ಟಿದ್ದು ಅಷ್ಟು ಹಣ ನೀಡಿದಿದ್ದರೆ ನಿಮ್ಮ ವಿರುದ್ಧ ಕಾರ್ಯಕ್ರಮ ಪ್ರಸಾರ ಮಾಡುವುದಾಗಿ ಬೆದರಿಕೆ ಇಟ್ಟಿದ್ದು ಈ ಸಂಬಂಧ ಕೋರಮಂಗಲ ಠಾಣೆಯಲ್ಲಿ ಉದ್ಯಮಿ ದೂರು ನೀಡಿದ್ದರು.

ಉದ್ಯಮಿಯನ್ನು ಬೆದರಿಸುವ ಸಲುವಾಗಿ ಸಣ್ಣ ಎಪಿಸೋಡ್ ಒಂದನ್ನು ಜನಶ್ರೀ ಚಾನೆಲ್ ನಲ್ಲಿ ಪ್ರಸಾರ ಮಾಡಲಾಗಿತ್ತು. ಹೀಗಾಗಿ ಉದ್ಯಮಿ ಮೊದಲ ಕಂತಿನ ಹಣವನ್ನು ನೀಡುತ್ತಿರುವಾಗ ವಾಹಿನಿ ಕಚೇರಿಯಲ್ಲೇ ಪೊಲೀಸರು ಲಕ್ಷ್ಮೀ ಪ್ರಸಾದ್ ವಾಜಪೇಯಿ ಮತ್ತು ಮಿಥುನ್ ಎಂಬುವರನ್ನು ಬಂಧಿಸಿದ್ದಾರೆ.

No Comments

Leave A Comment