Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ತಲಪಾಡಿ ಟೋಲ್‌ಬೂತ್‌ನಲ್ಲಿ ದುಂಡಾವರ್ತನೆ ಯುವಕನ ಮೇಲೆ ತೀವ್ರ ಹಲ್ಲೆ

ಉಳ್ಳಾಲ: ತಲಪಾಡಿ ಟೋಲ್‌ಗೇಟ್‌ನಲ್ಲಿ ಗುರುವಾರ ವೃದ್ಧರೊಬ್ಬರ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸುವುದನ್ನು  ಪ್ರಶ್ನಿಸಿದ ಯುವಕನೊಬ್ಬನ ಮೇಲೆ ಅದೇ ಸಿಬ್ಬಂದಿ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.

ಮಂಗಳೂರು ಕಂದಕದ ಹಾಜಿ ರೆಸಿಡೆನ್ಸಿ ನಿವಾಸಿ ಮಹಮ್ಮದ್ ಸಾಲಿ ಎಂಬವರ ಪುತ್ರ ಅಬ್ದುಲ್ ಹಮೀದ್ ಸರಾಫತ್ (25) ಹಲ್ಲೆಗೊಳಗಾದವರು. ಕೆಲಸದ ನಿಮಿತ್ತ ಮಂಗಳೂರಿನಿಂದ ಕಾಸರಗೋಡಿಗೆ  ಕಾರಿನಲ್ಲಿ  ತೆರಳುವ ಸಂದರ್ಭ ಘಟನೆ ನಡೆದಿದೆ.

ಮಧ್ಯಾಹ್ನ 2.30 ರ ವೇಳೆ  ತಲಪಾಡಿ ಟೋಲ್ ಗೇಟ್ ತಲುಪುತ್ತಿದ್ದಂತೆ ಅಲ್ಲಿ  ವಾಹನ ಚಾಲಕ ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿ ಸುತ್ತಿದ್ದುದನ್ನು ಸರಾಫತ್‌ ಕಂಡರು. ಇದನ್ನು ಪ್ರಶ್ನಿಸಿ ‘ಅವರದ್ದು ತಪ್ಪಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ,  ಕಾನೂನು ಕೈಗೆತ್ತಿಕೊಂಡು ಹಲ್ಲೆ ನಡೆಸು ವುದು ಸರಿಯಲ್ಲ’ ಎಂದು ತಿಳಿಸಿದ್ದರು.

ಇದೇ ವೇಳೆ ಟೋಲ್‌ಗೇಟ್‌ನ ಸುಮಾರು 20ರಷ್ಟು ಸಿಬ್ಬಂದಿ  ಸರಾಫತ್‌ ಅವರನ್ನು ಸುತ್ತುವರಿದು ಕೆನ್ನೆಗೆ, ಬೆನ್ನಿಗೆ,  ಎದೆಗೆ  ಹೊಡೆದು ಕಾಲಿನಿಂದ ತುಳಿ ದರು. ಸ್ಥಳಕ್ಕೆ ಬಂದ ಅಪರಿಚಿತರೊಬ್ಬರು ಗಾಯಗೊಂಡ ಸರಾಫತ್ ಅವರನ್ನು ಉಳ್ಳಾಲದ ಆಸ್ಪತ್ರೆಗೆ ದಾಖಲಿಸಿದರು.

‘ಹಲ್ಲೆ ನಡೆಸಿದ ಎಲ್ಲರಲ್ಲೂ ಗುರುತಿನ ಚೀಟಿಯ ಬ್ಯಾಜ್ ಇದೆ, ಹೀಗಾಗಿ ನನ್ನ ಮೇಲೆ ಹಲ್ಲೆ ನಡೆಸಿದ್ದು ಟೋಲ್‌ಗೇಟ್ ಸಿಬ್ಬಂದಿಯೇ’ ಎಂದು ಅವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು  ಟೋಲ್ ಗೇಟ್‌ನಲ್ಲಿನ ಸಿಸಿಟಿವಿ ದಾಖಲೆಯನ್ನು ಸಂಗ್ರಹಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಹಿಂದೆ ನಕಲಿ ರಶೀದಿ ನೀಡಿ ವಾಹನ ಸವಾರರೊಬ್ಬರನ್ನು ವಂಚಿಸಿದ ಘಟನೆಯೂ ಇದೇ ಟೋಲ್ ಬೂತ್ ನಲ್ಲಿ ನಡೆದಿತ್ತು.

ಹೆಚ್ಚುವರಿ ಹಣ ವಸೂಲಿ
ಮಂಗಳೂರು ವಿಮಾನ ನಿಲ್ದಾಣಕ್ಕೆಂದು ಬರುವ ಕೇರಳಿಗರು ವಾಪಸಾಗುವಾಗ ವಾಹನದಲ್ಲಿ  ಸಾಮಾನುಗಳು ಇರುತ್ತವೆ. ಅದನ್ನು ಪ್ರಶ್ನಿಸುವ ಟೋಲ್ ಸಿಬ್ಬಂದಿ. ವಾಹನಗಳಲ್ಲಿ ಹೆಚ್ಚುವರಿ ಸಾಮಾನುಗಳಿವೆ, ಅದಕ್ಕಾಗಿ ಹೆಚ್ಚುವರಿ ಹಣ  ನೀಡಬೇಕೆಂದು ಹೆಚ್ಚುವರಿ ಹಣ ವಸೂಲಿ ಮಾಡುವ ದಂಧೆಯೂ ಇಲ್ಲಿ ವ್ಯಾಪಕವಾಗಿದೆ. ಬೆಂಗಳೂರು, ಹೈದರಾಬಾದ್ ಮೊದಲಾದೆಡೆ ಟೋಲ್ ಸಮೀಪ ಪೊಲೀಸರು ಇರುತ್ತಾರೆ.

ಆದರೆ ಜಿಲ್ಲೆಯಲ್ಲಿರುವ  ಎಲ್ಲ ಟೋಲ್ ಬೂತುಗಳಲ್ಲಿ 10 ರಿಂದ 15 ರಷ್ಟು ಯುವಕರಿದ್ದು, ಗೂಂಡಾಗಳಂತೆ ವರ್ತಿಸುತ್ತಿರುವ ಪ್ರಮೇಯಗಳು ನಡೆಯುತ್ತಿವೆ. ಇದನ್ನು ಸಂಬಂಧಪಟ್ಟ ಇಲಾಖೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹಲ್ಲೆಗೊಳಗಾದ  ಅಬ್ದುಲ್ ಹಮೀದ್ ಸರಾಫತ್ ಅವರ ಮಾವ ಹಾಗೂ ಹೋಪ್ ಫೌಂಡೇಷನ್‌ನ ಸ್ಥಾಪಕಾಧ್ಯಕ್ಷ ಸೈಫ್‌ ಸುಲ್ತಾನ್‌ ಅವರು ಆಗ್ರಹಿಸಿದ್ದಾರೆ.

No Comments

Leave A Comment