Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಉತ್ತರ ಪ್ರದೇಶ: ಹಳಿತಪ್ಪಿದ ಮೀರತ್–ಲಖನೌ ರಾಣಿ ಎಕ್ಸ್‌ಪ್ರೆಸ್‌ ರೈಲು– 10ಮಂದಿಗೆ ಗಾಯ


ನವದೆಹಲಿ:
ಉತ್ತರಪ್ರದೇಶ ಮೀರತ್-ಲಖನೌ ರಾಜ್ಯ ರಾಣಿ ಎಕ್ಸ್’ಪ್ರೆಸ್ ರೈಲು ರಾಂಪುರ ಜಿಲ್ಲೆ ಬಳಿ ಹಳಿತಪ್ಪಿದ್ದು, ಘಟನೆಯಲ್ಲಿ  10 ಮಂದಿ ಪ್ರಯಾಣಿಕರಿಗೆ ಗಾಯವಾಗಿರುವ ಘಟನೆಯೊಂದು ಶನಿವಾರ ಬೆಳಿಗ್ಗೆ ನಡೆದಿದೆ.

ರಾಣಿ ಎಕ್ಸ್ ಪ್ರೆಸ್ ರೈಲಿನ 8 ಬೋಗಿಗಳು ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ರಾಂಪುರ ಜಿಲ್ಲೆ ಬಳಿ ಹಳಿತಪ್ಪಿದ್ದು, ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನೆ ಸಂಬಂಧ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಪ್ರಕರಣ ಸಂಬಂಧ ವೈಯಕ್ತಿಕವಾಗಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇನೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಾಳುಗಳು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಆಶಿಸುತ್ತೇನೆಂದು ಹೇಳಿದ್ದಾರೆ.

ಘಟನೆಯನ್ನು ಸೇರಿದಂತೆ ಉತ್ತರಪ್ರದೇಶ ರಾಜ್ಯದಲ್ಲಿ 1 ತಿಂಗಳಲ್ಲಿ ಎರಡು ರೈಲುಗಳು ಹಳಿತಪ್ಪಿದಂತಾಗಿದೆ. ಮಾರ್ಚ್ 31 ರಂದು ಮಹಾರೋಶ್ಲಾ ಎಕ್ಸ್ ಪ್ರೆಸ್ ರೈಲಿನ 8 ಬೋಗಿಗಳು ಹಳಿ ತಪ್ಪಿ 25 ಜನರು ಸಾವನ್ನಪ್ಪಿದ್ದರು.

No Comments

Leave A Comment