Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ‘ಅಪಾಯಕಾರಿ ಆಟ’ ಆಡುತ್ತಿದೆ; ಪರಿಕ್ಕರ್

ಪಣಜಿ: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್’ಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ‘ಅಪಾಯಕಾರಿ ಆಟ’ ಆಟ ಆಡುತ್ತಿದೆ ಎಂದು ರಕ್ಷಣಾ ಖಾತೆ ಮಾಜಿ ಸಚಿವ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಶನಿವಾರ ಹೇಳಿದ್ದಾರೆ.

ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಕುಲ್’ಭೂಷಣ್ ಜಾಧವ್ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಜಾಧವ್ ಪ್ರಕರಣ ಸಂಬಂಧ ಪಾಕಿಸ್ತಾನ “ಅಪಾಯಕಾರಿ ಆಟ’ವನ್ನು ಆಡುತ್ತಿದೆ. ಒಂದೊಮ್ಮೆ ಭಾರತ ಪಾಕಿಸ್ತಾನಕ್ಕೆ ತಿರುಗೇಟು ನೀಡಿದರೆ, ಆ ದೇಶಕ್ಕೆ ಹೋರಾಟ ಮಾಡುವ ಶಕ್ತಿಯೇ ಇರುವುದಿಲ್ಲ ಎಂಬುದನ್ನು ಪಾಕಿಸ್ತಾನ ಅರ್ಥಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಆದರೆ, ನಾವು ಶಾಂತಿಯನ್ನು ಬಯಸುತ್ತೇವೆ. ನಾವು ಪ್ರಚೋದನೆ ಮಾಡುವುದಿಲ್ಲ. ಆಧ್ದರಿಂದ ಪಾಕಿಸ್ತಾನ ಸರ್ಕಾರ ಕುಲಭೂಷಣ್ ಜಾಧವ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿಸಬೇಕೆಂದು ಪರಿಕ್ಕರ್ ಅವರು ಒತ್ತಾಯಿಸಿದ್ದಾರೆ.

ಮುಖ್ಯವಾಗಿ ಹೇಳಬೇಕೆಂದರೆ, ಜಾಧವ್ ಅವರನ್ನು ಅಪಹರಣ ಮಾಡಲಾಗಿತ್ತು. ಜಾಧವ್ ಪಾಕಿಸ್ತಾನದವರಲ್ಲ. ಇರಾನ್’ನಲ್ಲಿದ್ದರು. ತಾಲಿಬಾನ್ ಗಳು ಜಾಧವ್ ಅವರನ್ನು ಅಪಹರಿಸಿ ಪಾಕಿಸ್ತಾನಕ್ಕೆ ಕರೆದೊಯ್ದಿದ್ದರು ಎಂದು ಇರಾನ್ ಹೇಳಿತ್ತು. ಇಂತಹ ಕೆಲಸಗಳನ್ನು ಮಾಡುವುದು ಪಾಕಿಸ್ತಾನಕ್ಕೆ ಚಾಳಿಯಾಗಿ ಹೋಗಿದೆ ಎಂದು ಕಿಡಿಕಾರಿದ್ದಾರೆ.

ಜಾಧವ್ ವಿಷಯ ಸಂಬಂಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸರಿಯಾದ ರೀತಿಯಲ್ಲಿಯೇ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಜಾಧವ್’ಗೆ ಗಲ್ಲು ಶಿಕ್ಷೆ ನೀಡಿದ್ದೇ ಆದರೆ, ನಾವು ಸುಮ್ಮನಿರುವುದಿಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಪಾಕಿಸ್ತಾನ ತನ್ನ ದುರ್ನಡತೆಯನ್ನು ಮುಂದುವರೆಸಿದ್ದೇ ಆದರೆ, ನಮ್ಮ ದೇಶ ಅಗತ್ಯ ಕೆಲಸಗಳನ್ನು ಮಾಡುತ್ತದೆ. ಪಾಕಿಸ್ತಾನವನ್ನು ನಾವು ನೋಡಿಕೊಳ್ಳುತ್ತೇವೆಂದು ಎಚ್ಚರಿಸಿದ್ದಾರೆ.

No Comments

Leave A Comment