Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಒಂದೇ ದಿನ ಐಪಿಎಲ್‌ನಲ್ಲಿ ಡಬಲ್ ಹ್ಯಾಟ್ರಿಕ್ ಸಾಧನೆ

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿ ಹಲವು ವಿಶೇಷ ದಾಖಲೆಗಳಿಗೆ ಸಾಕ್ಷಿಯಾಗಿದೆ. ಒಂದೇ ದಿನ ಐಪಿಎಲ್ ನಲ್ಲಿ ಆಟಗಾರರಿಬ್ಬರು ಡಬಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಆಟಗಾರ ಸ್ಯಾಮುಯೆಲ್ ಬದ್ರಿ ಹ್ಯಾಟ್ರಿಕ್ ವಿಕೆಟ್ ಕೀಳುವ ಮೂಲಕ ಪ್ರಸಕ್ತ ಆವೃತ್ತಿಯ ಮೊದಲು ಹ್ಯಾಟ್ರಿಕ್ ವೀರ ಎನಿಸಿದ್ದಾರೆ. ಇನ್ನು ಪುಣೆ ವಿರುದ್ಧ ಗುಜರಾತ್ ಲಯನ್ಸ್ ಆ್ಯಂಡ್ರೂ ಟೈ 20ನೇ ಓವರ್ ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದರು.

ಐಪಿಎಲ್ ಟೂರ್ನಿಯಲ್ಲಿ 16 ಬೌಲರ್ ಗಳು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಅಮಿತ್ ಮಿಶ್ರಾ 3 ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದು ಹ್ಯಾಟ್ರಿಕ್ ವಿಕೆಟ್ ಪಡೆದ ಅಗ್ರ ಆಟಗಾರ ಎನಿಸಿದ್ದಾರೆ.

No Comments

Leave A Comment