Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉಪ ಚುನಾವಣೆ: ನಂಜನಗೂಡು, ಗುಂಡ್ಲುಪೇಟೆ ಕಾಂಗ್ರೆಸ್ ತೆಕ್ಕೆಗೆ; ಬಿಜೆಪಿಗೆ ತೀವ್ರ ಮುಖಭಂಗ

ಮೈಸೂರು: ತೀವ್ರ ಕುತೂಹಲ ಕೆರಳಿಸಿದ್ದ ನಂಜನಗೂಡು-ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗಳಾದ ಗೀತಾ ಮಹದೇವ ಪ್ರಸಾದ್ ಹಾಗೂ ಕಳಲೆ  ಕೇಶವ ಮೂರ್ತಿ ಅವರು ಗೆಲುವು ಸಾಧಿಸಿದ್ದಾರೆ.

ರಾಜ್ಯ ಸರ್ಕಾರ ಮತ್ತು ಶ್ರೀನಿವಾಸ್ ಪ್ರಸಾದ್ ಅವಲ ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಅವರಿಗೆ ತೀವ್ರ ಮುಖಭಂಗವಾಗಿದ್ದು, ಬರೊಬ್ಬರಿ 21, 334  ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಈ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್ ಒಟ್ಟು 64, 878 ಮತಗಳನ್ನು ಪೆಡೆದಿದ್ದು, ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವ ಮೂರ್ತಿ ಒಟ್ಟು 86,212 ಮತಗಳನ್ನು  ಪಡೆದಿದ್ದಾರೆ.

ಇನ್ನು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಮತ್ತು ದಿವಂಗತ ಎಚ್ ಎಸ್ ಮಹದೇವ ಪ್ರಸಾದ್ ಅವರ ಪತ್ನಿ ಗೀತಾ ಮಹದೇವ ಪ್ರಸಾದ್ ಅವರು ಜಯಭೇರಿ ಭಾರಿಸಿದ್ದು, ಗೀತಾ ಅವರು ಒಟ್ಟು 12, 877 ಮತಗಳ  ಅಂತರಿಂದ ಬಿಜೆಪಿಯ ನಿರಂಜನ ಕುಮಾರ್ ಅವರನ್ನು ಸೋಲಿಸಿದ್ದಾರೆ. ಗೀತಾ ಅವರು ಒಟ್ಟು 90,258 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ನಿರಂಜನ್ ಕುಮಾರ್ 79, 381 ಮತಗಳನ್ನು ಪಡೆದು ಸೋಲುಕಂಡಿದ್ದಾರೆ.

ನಂಜನಗೂಡು ಕ್ಷೇತ್ರ:
ಕಳಲೆ ಕೇಶವಮೂರ್ತಿ(ಕಾಂಗ್ರೆಸ್) 86,212 ಮತ
ಶ್ರೀನಿವಾಸ್ ಪ್ರಸಾದ್(ಬಿಜೆಪಿ)  64,878

ಗೆಲುವಿನ ಅಂತರ: 21,334

 

ಗುಂಡ್ಲುಪೇಟೆ ಕ್ಷೇತ್ರ:
ಗೀತಾ ಮಹದೇವಪ್ರಸಾದ್(ಕಾಂಗ್ರೆಸ್) 90, 258
ನಿರಂಜನ್ ಕುಮಾರ್ (ಬಿಜೆಪಿ) 79, 381
ಗೆಲುವಿನ ಅಂತರ: 10,877

No Comments

Leave A Comment