Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಖ್ಯಾತ ಹಾಸ್ಯ ನಟ ಚಾರ್ಲಿ ಮರ್ಫಿ ನಿಧನ

ನ್ಯೂಯಾರ್ಕ್:  ಹಾಸ್ಯ ನಟ, ಎಡ್ಡಿ ಮರ್ಫಿ ಅವರ ಹಿರಿಯ ಸಹೋದರ ಚಾರ್ಲಿ ಮರ್ಫಿ ಏ.12 ರಂದು ನಿಧನರಾಗಿದ್ದಾರೆ.

ಲುಕೆಮಿಯಾ (ಕ್ಯಾನ್ಸರ್) ಸಮಸ್ಯೆಯಿಂದ ಬಳಲುತ್ತಿದ್ದ ಅವರು ನ್ಯೂಯಾರ್ಕ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಚಾಪ್ಪೆಲ್ಲೇ’ಸ್ ಶೋ ಎಂಬ ಹಾಸ್ಯ ವಿಡಂಬನೆ ಕಾರ್ಯಕ್ರಮದಲ್ಲಿ ತಮ್ಮ ನಟನೆಯ ಮೂಲಕ ಚಾರ್ಲಿ ಮರ್ಫಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ್ದರು.

ಚಾರ್ಲಿ ಮರ್ಫಿ ಅವರ ಸಮಕಾಲೀನ ಗಣ್ಯರು ಹಾಸ್ಯ ನಟನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಹಾಸ್ಯ ನಟ ಕ್ರಿಸ್ ರಾಕ್ ಚಾರ್ಲಿ ಮರ್ಫಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ” ತಮಾಷೆಯ, ಅತ್ಯಂತ ನೈಜ ವ್ಯಕ್ತಿತ್ವದ ಸಹೋದರನನ್ನು ಕಳೆದುಕೊಂಡಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ. ಬ್ಯಾಸ್ಕೆಟ್ ಬಾಲ್ ನ ಮಾಜಿ ಸೂಪರ್ ಸ್ಟಾರ್ ಮ್ಯಾಜಿಕ್ ಜಾನ್ ಸನ್ ಸಹ ಟ್ವೀಟ್ ಮಾಡಿದ್ದು, ಚಾಪ್ಪೆಲ್ಲೇ’ಸ್ ಶೋ ನಲ್ಲಿ ಚಾರ್ಲಿ ಮರ್ಫಿ ಅವರ ನಟನೆಯಲ್ಲಿರುತ್ತಿದ್ದ ಹಾಸ್ಯವನ್ನು ನಾನು ಬೇರೆಲ್ಲೂ ಕಂಡಿಲ್ಲ ಎಂದಿದ್ದಾರೆ. ಹ್ಯಾಮಿಲ್ಟನ್ ನಾಟಕಕಾರ ಲಿನ್ ಮ್ಯಾನುಯಲ್ ಮಿರಾಂಡಾ ಸಹ ಟ್ವೀಟ್ ಮಾಡಿದ್ದು ಮರ್ಫಿ ಅವರ ಕಥಾನಿರೂಪಣೆ ಮರೆಯಲಾಗದ್ದು ಎಂದು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಮರ್ಫಿ ಹಾಗೂ ಇನ್ನಿತರ ಹಾಸ್ಯ ನಟರೊಂದಿಗೆ ಪ್ರವಾಸ ಕೈಗೊಂಡಿದ್ದ ಡಿಎಲ್ ಹ್ಯೂಗ್ಲಿ ಅವರೂ ಸಹ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ. ಅವರ್ ಫ್ಯಾಮಿಲಿ ವೆಡ್ಡಿಂಗ್, ಕಿಂಗ್ಸ್ ರಾನ್ಸಮ್, ಸಿಬಿ4 ಸೇರಿದಂತೆ ಹಲವು ಚಲನ ಚಿತ್ರಗಳಲ್ಲಿಯೂ ಚಾರ್ಲಿ ಮರ್ಫಿ ನಟಿಸಿದ್ದಾರೆ.

No Comments

Leave A Comment